Publish Date: Sun, 06 Nov 2022 (18:15 IST)
Updated Date: Sun, 06 Nov 2022 (18:19 IST)
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಗುಜರಾತ್ನ ವಡೋದರಾದಲ್ಲಿ ವೈಮಾನಿಕ ಪ್ರದರ್ಶನವನ್ನು ನೀಡಿತು. ದರ್ಜಿಪುರದ ವಾಯುಪಡೆ ನಿಲ್ದಾಣದ ಪರೇಡ್ ಮೈದಾನದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿತ್ತು. ಇಂಡಿಯನ್ ಏರ್ ಫೋರ್ಸ್ನ 90 ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವೈಮಾನಿಕ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. ಆಗಸದಲ್ಲಿ ವಿಮಾನಗಳು ಬಣ್ಣಬಣ್ಣದ ಚಿತ್ತಾರ ಮೂಡಿಸಿದ್ವು, ಸಾಲಾಗಿ ಸಾಗಿದ ವಿಮಾನಗಳನ್ನು ಕಂಡ ಜನರು ಹರ್ಷಿತರಾದ್ರು.