Select Your Language

Notifications

webdunia
webdunia
webdunia
webdunia

ನಿಯಮ ಪಾಲಿಸದ 2 ಪರೀಕ್ಷಾ ಕೇಂದ್ರ ರದ್ದು?

ನಿಯಮ ಪಾಲಿಸದ 2 ಪರೀಕ್ಷಾ ಕೇಂದ್ರ ರದ್ದು?
ಕಲಬುರಗಿ , ಭಾನುವಾರ, 13 ನವೆಂಬರ್ 2022 (08:57 IST)
ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ವಿ.ವಿ. ಕುಲಪತಿ ಪ್ರೊ. ದಯಾನಂದ್ ಅಗಸರ್ ಅವರು,

ಬೀದರ್ ನಗರದ ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ವಿ.ವಿ.ಯ ಪರೀಕ್ಷಾ ನಿಯಮ ಪಾಲಿಸದ 2 ಪರೀಕ್ಷಾ ಕೇಂದ್ರಗಳನ್ನು ರದ್ದುಗೊಳಿಸಿದ್ದಾರೆ.

ಬೀದರಿನ ಸನ್ ಶೈನ್ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದಾಗ ಪರೀಕ್ಷಾ ಸಂದರ್ಭದಲ್ಲಿ ಸಿಸಿ ಟಿವಿ ಆಫ್ ಮಾಡಿರುವುದು ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿರುವುದನ್ನು ಗಮನಿಸಲಾಗಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ವಿ.ವಿ. ನಿಯಮಾನುಸಾರ ಪರೀಕ್ಷೆ ಜರುಗಿಸದ ಕಾರಣ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ತಕ್ಷಣದಿಂದ ರದ್ದುಪಡಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದಿನ ಎಲ್ಲಾ ಪರೀಕ್ಷೆಗಳನ್ನು ಸಮೀಪದ ಕರ್ನಾಟಕ ಪದವಿ ಮಹಾವಿದ್ಯಾಲಯಕ್ಕೆ ವರ್ಗಾಯಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?