Select Your Language

Notifications

webdunia
webdunia
webdunia
webdunia

ಅಮೆರಿಕಕ್ಕೆ ಚೀನಾ ಖಡಕ್ ಎಚ್ಚರಿಕೆ!?

ಅಮೆರಿಕಕ್ಕೆ ಚೀನಾ ಖಡಕ್ ಎಚ್ಚರಿಕೆ!?
ಬೀಜಿಂಗ್ , ಶನಿವಾರ, 20 ನವೆಂಬರ್ 2021 (10:16 IST)
ಬೀಜಿಂಗ್ : ತೈವಾನ್ ವಿಚಾರವಾಗಿ ಅಮೆರಿಕ ಮತ್ತು ಚೀನಾದ ನಡುವೆ ನಡೆಯುತ್ತಿರುವ ಗುದ್ದಾಟ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಈ ವಿಚಾರವಾಗಿ ಸಮನ್ವಯತೆ ಸಾಧಿಸಲು ಕರೆದಿದ್ದ ವರ್ಚುವಲ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅಮೆರಿಕ ಅಧ್ಯಕ್ಷ ಜೋ ಬಿಡೆನ್ಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದು, ಬೆಂಕಿ ಜೊತೆ ಆಟ ಆಡುವವರು ಸುಟ್ಟು ಭಸ್ಮವಾಗುತ್ತಾರೆ ಎಂದು ಹೇಳಿದ್ದಾರೆ.
ಸುಮಾರು ಮೂರುವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ವರ್ಚುವಲ್ ಸಭೆಯಲ್ಲಿ ಹಲವು ವಿಷಯಗಳನ್ನು ಇಬ್ಬರು ನಾಯಕರು ಚರ್ಚಿಸಿದ್ದಾರೆ. ಸಂಭಾಷಣೆ ಗೌರವಯುತ ಮತ್ತು ನೇರವಾಗಿತ್ತು ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ಈ ಶೃಂಗಸಭೆ ದೈತ್ಯ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಪ್ರತಿಸ್ಪರ್ಧಿಗಳ ನಡುವೆ ಹಳಸುತ್ತಿರುವ ಸಂಬಂಧವನ್ನು ಗಟ್ಟಿಗೊಳಿಸುವ ಇರಾದೆ ಹೊಂದಿದ್ದರೂ, ತೈವಾನ್ ವಿಚಾರವೇ ಹೆಚ್ಚು ಚರ್ಚೆಯಾಯಿತು ಎನ್ನಲಾಗಿದೆ.
ತೈವಾನ್ ಮೂಲಕ ಚೀನಾವನ್ನು ನಿಯಂತ್ರಿಸಬಹುದು ಎಂದು ಅಮೆರಿಕದದ ಕೆಲ ಜನ ಅಂದುಕೊಂಡಿದ್ದಾರೆ. ಈ ಪ್ರವೃತ್ತಿ ಹೆಚ್ಚು ಅಪಾಯಕಾರಿ ಮತ್ತು ಇದು ಬೆಂಕಿ ಜೊತೆ ಆಟವಾಡುವ ಪ್ರವೃತ್ತಿಯಾಗಿದೆ. ಬೆಂಕಿ ಜೊತೆ ಯಾರು ಆಟ ಆಡುತ್ತಾರೋ ಅವರು ಭಸ್ಮವಾಗುತ್ತಾರೆ ಎಂದು ಕ್ಷಿ ಜಿನ್ಪಿಂಗ್ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದಿಲ್ಲಿಯಲ್ಲಿ ಎರಡು ದಿನ ಲಾಕ್ಡೌನ್!