Select Your Language

Notifications

webdunia
webdunia
webdunia
webdunia

ಉಕ್ರೇನ್‌ಗೆ ಯೂನಿಯನ್‌ನಲ್ಲಿ ಅಭ್ಯರ್ಥಿ ಸ್ಥಾನ

ಉಕ್ರೇನ್‌ಗೆ ಯೂನಿಯನ್‌ನಲ್ಲಿ ಅಭ್ಯರ್ಥಿ ಸ್ಥಾನ
ಕೀವ್ , ಶುಕ್ರವಾರ, 24 ಜೂನ್ 2022 (08:17 IST)
ಕೀವ್ : ರಷ್ಯಾ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ಗೆ ಯುರೋಪಿಯನ್ ಯೂನಿಯನ್ ಅಭ್ಯರ್ಥಿ ಸ್ಥಾನ ನೀಡಿದೆ.

ಯುರೋಪಿಯನ್ ಯೂನಿಯನ್ ನಾಯಕರು ಗುರುವಾರ ಉಕ್ರೇನ್ ಹಾಗೂ ಮಾಲ್ಡೋವಾಗೆ ಅಭ್ಯರ್ಥಿ ಸ್ಥಾನವನ್ನು ನೀಡಿದ್ದಾರೆ.

ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ 4 ದಿನಗಳ ಬಳಿಕ ಫೆಬ್ರವರಿ 28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶಕ್ಕೆ ತಕ್ಷಣವೇ ಒಕ್ಕೂಟದ ಸದಸ್ಯ ಸ್ಥಾನ ನೀಡುವಂತೆ ಕೋರಿಕೊಂಡಿದ್ದರು.

ಬಳಿಕ ಉಕ್ರೇನ್ಗೆ ಅಭ್ಯರ್ಥಿ ಸ್ಥಾನ ನೀಡಬೇಕೆಂದು ಜೂನ್ 17ರಂದು ಯುರೋಪಿಯನ್ ಕಮಿಷನ್ ಶಿಫಾರಸು ಮಾಡಿತ್ತು. ಇದೀಗ ಉಕ್ರೇನ್ ಇಯುನ ಅಭ್ಯರ್ಥಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತಮ್ಮ ದೇಶ ಹಾಗೂ ಮಾಲ್ಡೋವಾ ಮೇಲಿನ EU ನಿರ್ಧಾರ ಅನನ್ಯ ಹಾಗೂ ಐತಿಹಾಸಿಕ ಕ್ಷಣ ಎಂದು ಶ್ಲಾಘಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ !