Publish Date: Tue, 24 May 2022 (20:04 IST)
Updated Date: Tue, 24 May 2022 (20:08 IST)
ಟೋಕಿಯೊದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆ ನಡೆಯುವ ಪ್ರದೇಶದಲ್ಲಿ ರಷ್ಯಾ ಹಾಗೂ ಚೀನಾದ ಯುದ್ಧ ವಿಮಾನಗಳು ಹಾರಾಟ ನಡೆಸಿವೆ ಎಂದು ಜಪಾನ್ ಗಂಭೀರ ಆರೋಪ ಮಾಡಿದೆ.
ಜಪಾನ್ ನ ರಾಜಧಾನಿ ಟೊಕಿಯೊದ ಪೂರ್ವ ಸಮುದ್ರದ ಬಳಿ ರಷ್ಯಾ ಹಾಗೂ ಚೀನಾದ ಯುದ್ಧ ವಿಮಾನಗಳು ಹಾರಾಟ ನಡೆಸಿವೆ ಎಂದು ಜಪಾನ್ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದು, ಇದೊಂದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.
ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ನರೇಂದ್ರ ಮೋದಿ ಅಲ್ಲದೇ ಆಸ್ಟ್ರೇಲಿಯಾ ಹಾಗೂ ಜಪಾನ್ ಮುಂತಾದ ದೇಶಗಳ ಮುಖಂಡರು ಪಾಲ್ಗೊಂಡಿದ್ದಾರೆ.