Select Your Language

Notifications

webdunia
webdunia
webdunia
webdunia

5 ರೂ. ಡಾಕ್ಟರ್ ಶಂಕರೇಗೌಡರಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

5 ರೂ. ಡಾಕ್ಟರ್ ಶಂಕರೇಗೌಡರಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು
bangalore , ಮಂಗಳವಾರ, 24 ಮೇ 2022 (19:44 IST)
hospital
ಐದು ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿರುವ ಮಂಡ್ಯದ ಡಾ. ಎಸ್. ಸಿ. ಶಂಕರೇಗೌಡ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರೂ ಆಗಿರುವ ಶಂಕರೇ ಗೌಡ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆಗಿದ್ದು, ಒಂದು ವಾರದ ಬಳಿಕ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆ ಇದೆ. ಶಂಕರೇಗೌಡರ ಪ್ರಾಣಕ್ಕೆ ಅಪಾಯವಿಲ್ಲ, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಡ್ಯ ತಾಲೂಕಿನ ಶಿವಳ್ಳಿಯವರಾದ ಡಾ. ಶಂಕರೇಗೌಡರು ಮಂಡ್ಯದಲ್ಲಿ ಕ್ಲೀನಿಕ್ ಇಟ್ಟುಕೊಂಡಿದ್ದು, ರೋಗಿಗಳಿಂದ ಕೇವಲ 5 ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ. ಇವರು 5 ರೂಪಾಯಿ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಹೆಚ್ಡಿಕೆ ಆಕ್ರೋಶ