ಶಿಕ್ಷೆ ಅನುಭವಿಸುತ್ತಿದ್ದ ದರೋಡೆಕೋರನೊಂದಿಗೆ ಸಲ್ಲಾಪವಾಡಿದ ಜೈಲಾಧಿಕಾರಿ

ಶುಕ್ರವಾರ, 10 ಜನವರಿ 2020 (06:28 IST)
ಬ್ರಿಟನ್ : ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಪಾಯಕಾರಿ ದರೋಡೆಕೋರನೊಂದಿಗೆ 27 ವರ್ಷದ ಮಹಿಳಾ ಜೈಲಾಧಿಕಾರಿ ಅಕ್ರಮ ಸಂಬಂಧ ಬೆಳೆಸಿದ ಘಟನೆ ಬ್ರಿಟನ್ ನ ವೇಲ್ಸ್ ನಲ್ಲಿ ನಡೆದಿದೆ.ಖುರಾಮ್ ರಜಾಕ್(29) ಕೈದಿಯಾಗಿದ್ದು, ಆಯೇಷಿಯಾ(29) ಜೈಲಾಧಿಕಾರಿ. ದರೋಡೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡ ರಜಾಕ್ ಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಕೈದಿಯನ್ನು ಮಹಿಳಾ ಜೈಲಾಧಿಕಾರಿ ಆಯೇಷಿಯಾ ಪ್ರೀತಿಸುತ್ತಿದ್ದು, ಜೈಲಿನಲ್ಲಿ ಫೋನ್ ಬಳಕೆಗೆ ನಿಷೇಧವಿದ್ದರೂ ಆತನೊಂದಿಗೆ ಫೋನಿನಲ್ಲಿಯೂ ಮಾತನಾಡುತ್ತಿದ್ದಳು, ಅಷ್ಟೇ ಅಲ್ಲದೇ ಆತನೊಂದಿಗೆ   ಜೈಲಿನಲ್ಲಿಯೇ ಶಾರೀರಿಕ ಸಂಬಂಧ ಬೆಳೆಸಿ ಫೋಟೊ ತೆಗೆದುಕೊಂಡಿದ್ದರು.


ಇದೀಗ ಸಾಕ್ಷಿ ಸಮೇತ ಸಿಕ್ಕಿಬಿದ್ದ ಜೈಲಾಧಿಕಾರಿಯನ್ನು ನ್ಯಾಯಲಯಕ್ಕೆ ಒಪ್ಪಿಸಲಾಗಿದ್ದು, ಆಕೆಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮೊಬೈಲ್ ಬಳಸಿದ ಹಿನ್ನಲೆಯಲ್ಲಿ ರಜಾಕ್ ಗೂ ಶಿಕ್ಷೆ ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಾಲೆಗೆ ನುಗ್ಗಿದ ಪೊಲೀಸ್ ಪೇದೆ ಶಿಕ್ಷಕಿಗೆ ಮಾಡಿದ್ದೇನು ಗೊತ್ತಾ?