Select Your Language

Notifications

webdunia
webdunia
webdunia
webdunia

ಸೇನಾ ಮುಖ್ಯಸ್ಥ ಬಿಪಿನ್ ಚೀನಾ ಕುರಿತ ಹೇಳಿಕೆಯಿಂದ ಭಾರತಕ್ಕೆ ಸಂಕಷ್ಟ?

ಸೇನಾ ಮುಖ್ಯಸ್ಥ ಬಿಪಿನ್ ಚೀನಾ ಕುರಿತ ಹೇಳಿಕೆಯಿಂದ ಭಾರತಕ್ಕೆ ಸಂಕಷ್ಟ?
ನವದೆಹಲಿ , ಶುಕ್ರವಾರ, 8 ಸೆಪ್ಟಂಬರ್ 2017 (08:16 IST)
ನವದೆಹಲಿ: ಡೋಕ್ಲಾಂ ಗಡಿ ಬಿಕ್ಕಟ್ಟಿನ ನಂತರ ಚೀನಾ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ ಎಂಬ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ ಚೀನಾವನ್ನು ಮತ್ತೆ ಕೆರಳಿಸಿದೆ.

 
ಬಿಪಿನ್ ಹೇಳಿಕೆ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್ ಪಿಂಗ್ ಕೈಗೊಂಡ ವಿಶ್ವಾಸಾರ್ಹ ಹಾಗೂ ಪರಸ್ಪರ ಸಹಕಾರ ನೀಡುವ ಆಶಯಗಳಿಗೆ ವಿರುದ್ಧವಾಗಿದೆ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

‘ಪರಸ್ಪರ ಸ್ನೇಹ ಹಸ್ತ ಚಾಚಿದ ಎರಡೇ ದಿನಗಳಲ್ಲಿ ಅವರು ಈ ರೀತಿ ಹೇಳಿದ್ದು ಸರಿಯಲ್ಲ. ಅಂತಹ ಹೇಳಿಕೆ ಅಧಿಕೃತವೇ ಅಥವಾ ಮಾತಿನ ಭರದಲ್ಲಿ ಹೇಳಿದ್ದೇ ಎಂದು ನಮಗೆ ಗೊತ್ತಿಲ್ಲ’ ಎಂದು ಚೀನಾ ಸರ್ಕಾರದ ವಕ್ತಾರರು ಹೇಳಿದ್ದಾರೆ.

ನಿನ್ನೆಯಷ್ಟೇ ಬಿಪಿನ್ ರಾವತ್, ಚೀನಾ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಪಾಕ್ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. ಹಾಗಾಗಿ ನಾವು ಯಾವುದೇ ಸಂದರ್ಭದಲ್ಲೂ ಯುದ್ಧಕ್ಕೆ ಸನ್ನದ್ಧವಾಗಿರಬೇಕು ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ.. ಅರಸಿನ ಪುಡಿ ಹೆಚ್ಚು ತಿನ್ನುವುದೂ ಅಪಾಯ! ಏನಾಗುತ್ತೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಹಂತಕನ ಸುಳಿವು ಸಿಕ್ಕರೆ ಮಾಹಿತಿ ಕೊಡಿ.. ಎಸ್ಐಟಿಯಿಂದ ಇಮೇಲ್, ಮೊಬೈಲ್ ಸಂಖ್ಯೆ ಬಿಡುಗಡೆ