Webdunia - Bharat's app for daily news and videos

Install App

Bilawal Bhutto Zardari: ಸಿಂಧೂ ನದಿ ನೀರು ಬಿಡದಿದ್ರೆ ರಕ್ತ ಹರಿಸುತ್ತೇವೆ: ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನದ ಬಿಲಾವಲ್ ಭುಟ್ಟೋ

Krishnaveni K
ಶನಿವಾರ, 26 ಏಪ್ರಿಲ್ 2025 (12:00 IST)
ಇಸ್ಲಾಮಾಬಾದ್: ಸಿಂಧೂ ನದಿ ನೀರು ಹರಿಸದೇ ಇದ್ದರೆ ನಾವು ಭಾರತದಲ್ಲಿ ರಕ್ತ ಹರಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಪಿಪಿಪಿ ಪಕ್ಷದ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಎಚ್ಚರಿಕೆ ನೀಡಿದ್ದಾನೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಲಾವಲ್ ಇಂತಹದ್ದೊಂದು ಬೆದರಿಕೆ ಹಾಕಿದ್ದಾನೆ. ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ ಭಾರತದ ಅಮಾಯಕ ಪ್ರವಾಸಿಗರ ಪ್ರಾಣ ತೆಗೆದ ಬಳಿಕ ರೊಚ್ಚಿಗೆದ್ದಿರುವ ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದವನ್ನು ಮುರಿದುಕೊಂಡಿತ್ತು.

ಇದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿದೆ. ಸಿಂಧೂ ನದಿ ನೀರು ಪಾಕಿಸ್ತಾನದ ಶೇ.80 ರಷ್ಟು ನೀರಿನ ಅಗತ್ಯ ಪೂರೈಸುತ್ತದೆ. ಹೀಗಾಗಿಯೇ ಈಗ ಭಾರತದ ನಿರ್ಧಾರದಿಂದ ಪಾಕಿಸ್ತಾನಕ್ಕೆ ದಿಕ್ಕೇ ತೋಚದಂತಾಗಿದೆ.

ಇದರ ಬೆನ್ನಲ್ಲೇ ಬಿಲಾವಲ್ ಭುಟ್ಟೋ ಭಾರತದಲ್ಲಿ ರಕ್ತಪಾತ ಹರಿಸುವ ಬೆದರಿಕೆ ಹಾಕಿದ್ದಾನೆ. ಸಿಂಧೂ ನದಿ ನೀರು ನಮ್ಮದು. ಇದು ಪಾಕಿಸ್ತಾನ ಪ್ರಜೆಗಳ ಜೀವನದಿ. ಸಿಂಧೂ ನದಿ ನೀರನ್ನು ಬಿಡದೇ ಹೋದರೆ ತಕ್ಕ ಉತ್ತರ ಕೊಡಬೇಕಾಗುತ್ತದೆ. ನದಿ ನೀರನ್ನು ತಡೆಯಬಾರದು. ದೇಶದ ಸಮಗ್ರತೆ ಮತ್ತು ಭದ್ರತೆ ವಿಚಾರದಲ್ಲಿ ನಾವು ರಾಜಿಯಾಗಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಜಮ್ಮು ಕಾಶ್ಮೀರದಲ್ಲಿ ಯುದ್ಧಕ್ಕೆ ತಯಾರಿ: ರಜೆಗಳು ರದ್ದು

India Pakistan: ಪಾಕಿಸ್ತಾನದ ಜೊತೆ ಯುದ್ಧ ನಡೆದರೆ ಭಾರತದ ಜೊತೆ ಯಾವೆಲ್ಲಾ ರಾಷ್ಟ್ರ ನಿಲ್ಲಬಹುದು ನೋಡಿ

Pehalgam: ಪಾಕಿಸ್ತಾನಕ್ಕೆ ಹನಿ ನೀರೂ ಹೋಗದಂತೆ ಭಾರತ ಮಾಡಿಕೊಂಡ ಉಪಾಯಗೇಳನು

Indian Army: ಮತ್ತೆ ಗಡಿಯಲ್ಲಿ ಪಾಕಿಸ್ತಾನ ಕ್ಯಾತೆ: ಗುಂಡಿನ ದಾಳಿಗೆ ಭಾರತೀಯರಿಂದಲೂ ಗುಂಡೇ ಉತ್ತರ

Karnataka Weather: ರಾಜ್ಯದಲ್ಲಿ ಇಂದು ಈ ಎಲ್ಲಾ ಜಿಲ್ಲೆಗಳಿಗೆ ಭಾರೀ ಮಳೆ

ಮುಂದಿನ ಸುದ್ದಿ
Show comments