ಬಾಂಗ್ಲಾದೇಶ: ಹಿರಿಯ ಹಿಂದೂ ಸಮುದಾಯದ ನಾಯಕನನ್ನು ಅವರ ಮನೆಯಿಂದ ಅಪಹರಿಸಿ, ಹೊಡೆದು ಸಾಯಿಸಿದ ಘಟನೆ ಉತ್ತರ ಬಾಂಗ್ಲಾದೇಶದ ದಿನಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಢಾಕಾದಿಂದ ಸುಮಾರು 330 ಕಿಮೀ ದೂರದಲ್ಲಿರುವ ದಿನಾಜ್‌ಪುರ ಜಿಲ್ಲೆಯಲ್ಲಿ ಅವರ ನಿವಾಸದಿಂದ ಕಿಡ್ನ್ಯಾಪ್ ಮಾಡಿ, ನಂತರ ಹೊಡೆದು ಸಾಯಿಸಿದ್ದಾರೆ.
ಈ ಘಟನೆಯು ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳವನ್ನು ಉಂಟುಮಾಡಿದೆ. ಹತ್ಯೆಯಾದ ವ್ಯಕ್ತಿಯನ್ನು ಭಬೇಶ್ ಚಂದ್ರ ರಾಯ್(58) ಎಂದು ಗುರುತಿಸಲಾಗಿದ್ದು, ಇವರು ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ತಿನ ಬಿರಾಲ್ ಘಟಕದ ಉಪಾಧ್ಯಕ್ಷರಾಗಿದ್ದರು. ಅವರು ಹಿಂದೂ ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಫೋನ್ ಕರೆದ ಸ್ವೀಕರಿಸಿದ ನಂತರ ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆ.
ಅವರನ್ನು ನರಬರಿ ಗ್ರಾಮಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಪ್ರತ್ಯಕ್ಷದರ್ಶಿಗಳ ಪ್ರಕಾರ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಅದೇ ದಿನ ಸಂಜೆ ಅವರ ದೇಹವನ್ನು ವ್ಯಾನ್‌ನಲ್ಲಿ ಮನೆ ಬಳಿ ಬಿಟ್ಟುಹೋಗಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.