Daily Horoscope
✕

ಮತ್ತೆ ಆರ್ಟೆಮಿಸ್ ಮೂನ್ ಮಿಷನ್ ಲಾಂಚಿಂಗ್ ಸ್ಥಗಿತ!

Webdunia
ಭಾನುವಾರ, 4 ಸೆಪ್ಟಂಬರ್ 2022 (09:22 IST)
ವಾಷಿಂಗ್ಟನ್ : ಆರ್ಟೆಮಿಸ್-1 ಮೂನ್ ಮಿಷನ್ ನಲ್ಲಿ ಇಂಧನ ಸೋರಿಕೆ ಸಮಸ್ಯೆಯನ್ನು ಇಂಜಿನಿಯರ್ಗಳ ತಂಡವು ಸ್ಥಿತಿಗೊಳಿಸುವಲ್ಲಿ ವಿಫಲವಾಗಿದ್ದು ನಾಸಾ ಮತ್ತೆ ರಾಕೆಟ್ ಉಡಾವಣೆಯನ್ನು ಮುಂದೂಡಿದೆ.
 
322 ಅಡಿ ಎತ್ತರದ ರಾಕೆಟ್ ಅನ್ನು ನಾಸಾ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಜಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಉಡಾವಣೆಯಾಗಬೇಕಿದ್ದ ಆರ್ಟಿಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದ್ದು, 2ನೇ ಬಾರಿಗೆ ಮುಂದೂಡಲ್ಪಟ್ಟಿದೆ.

ಇಂಜಿನ್ ಬ್ಲೀಡ್ ಸಮಸ್ಯೆಯಿಂದಾಗಿ ಆರ್ಟೆಮಿಸ್-1ನ ಉಡಾವಣೆಯು ನಡೆಯುತ್ತಿಲ್ಲ. ಆಗಸ್ಟ್ 29 ರಂದೇ ರಾಕೆಟ್ ಉಡಾವಣೆಯಾಗಬೇಕಿತ್ತು. ಆದರೆ ಆರ್ಎಸ್-25 ಇಂಜಿನ್-3ರಲ್ಲಿ ಸಮಸ್ಯೆ ಕಾಣಿಸಿಕೊಂಡು, ಇಂಧನ ಸೋರಿಕೆಯಾಗಿದ್ದರಿಂದಾಗಿ ಸೆಪ್ಟಂಬರ್ 3ಕ್ಕೆ ಮುಂದೂಡಲಾಗಿತ್ತು.

ಆದರೆ ರಾಕೆಟ್ಗೆ ಇಂಧನ ವರ್ಗಾಯಿಸುವ ಯಂತ್ರಾಂಶದಲ್ಲಿನ ಸೋರಿಕೆಗೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸಲು ಇಂಜಿನಿಯರ್ ತಂಡವು ವಿಫಲವಾಗಿದ್ದರಿಂದಾಗಿ ಮತ್ತೆ ರಾಕೆಟ್ ಉಡಾವಣೆ ಮುಂದೂಡಲಾಗಿದೆ ಎಂದು ನಾಸಾ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೇ ಮುಂದಿನ ಉಡಾವಣಾ ಸಮಯವನ್ನು ಶೀಘ್ರವೇ ತಿಳಿಸುವುದಾಗಿ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ: ಸಿ.ಟಿ.ರವಿ

ಸ್ಟಿಂಗ್ ಆಪರೇಷನ್ ಸಿನಿಮಾದ ನಿರ್ಮಾಪಕ, ನಿರ್ದೇಶಕ ಯಾರು: ಬಿ.ಶ್ರೀರಾಮುಲು

ಇದ್ದಕ್ಕಿದ್ದಂತೆ ಗಂಡಕಿ ನದಿಯಲ್ಲಿ ನುಗ್ಗಿ ಬಂದ ಪ್ರವಾಹ: ಭೀಕರ ದೃಶ್ಯ ಸೆರೆ Video

ಪೊಲೀಸ್ ಕಸ್ಟಡಿಯಲ್ಲಿದ್ದ ಅಭಿಜಿತ್ ದಿಪ್ಕೆ ಮತ್ತು ಸ್ನೇಹಿತರು ಕೊನೆಗೂ ರಿಲೀಸ್: ಆದರೆ ಷರತ್ತು ಅನ್ವಯ

ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಮೆಟ್ರೋದಲ್ಲಿ ಪ್ರಯಾಣ

ಮುಂದಿನ ಸುದ್ದಿ
Show comments