Select Your Language

Notifications

webdunia
webdunia
webdunia
webdunia

ಮಕ್ಕಳ ಅಶ್ಲೀಲ ಚಿತ್ರ ಇಟ್ಟುಕೊಂಡಿದ್ದಕ್ಕೆ ಅಮೆರಿಕಾದಲ್ಲಿ ಜೈಲು ಪಾಲಾದ ಭಾರತೀಯ ಯುವಕ

ಮಕ್ಕಳ ಅಶ್ಲೀಲ ಚಿತ್ರ ಇಟ್ಟುಕೊಂಡಿದ್ದಕ್ಕೆ  ಅಮೆರಿಕಾದಲ್ಲಿ ಜೈಲು ಪಾಲಾದ ಭಾರತೀಯ ಯುವಕ
ನ್ಯೂಯಾರ್ಕ್ , ಸೋಮವಾರ, 6 ಆಗಸ್ಟ್ 2018 (10:58 IST)
ನ್ಯೂಯಾರ್ಕ್ : ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಕಾರಣಕ್ಕಾಗಿ ಭಾರತೀಯ ಯುವಕನೊಬ್ಬನಿಗೆ ಅಮೆರಿಕಾದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.


ಅಮೆರಿಕದಲ್ಲಿ 18 ವರ್ಷಗಳಿಗಿಂತ ಕೆಳಗಿನ ಪ್ರಾಯದವರನ್ನು ಲೈಂಗಿಕ ಚಿತ್ರಗಳಲ್ಲಿ ಬಳಸಿಕೊಳ್ಳುವುದು ಮತ್ತು ಆ ಚಿತ್ರಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಭಾರತ ಮೂಲದ ಅಭಿಜತ್​ ದಾಸ್​(28) ಎಂಬಾತ ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿಕೊಂಡಿದ್ದ. ಇತನ ಬಳಿ ಮಕ್ಕಳ ಅಶ್ಲೀಲ ಚಿತ್ರಗಳಿರುವ 1000 ಪೋಟೋಗಳು ಹಾಗೂ 380 ವಿಡಿಯೋಗಳು ಪತ್ತೆಯಾಗಿದ್ದವು.


ಆದಕಾರಣ ಆತ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.  ಈತನಿಗೆ ಅಮೆರಿಕಾದ ಫೆಡರಲ್​ ಕೋರ್ಟ್​ 52 ತಿಂಗಳ ಜೈಲುಶಿಕ್ಷೆ ವಿಧಿಸಿದೆ ಎಂದು ಯುಎಸ್​ ಅಟಾರ್ನಿ ಸ್ಕಾಟ್​ ಬ್ರಾಡ್ಲಿ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ ವೈ ಆರೋಪಕ್ಕೆ ಎಚ್ ಡಿ ರೇವಣ್ಣ ತಿರುಗೇಟು