Select Your Language

Notifications

webdunia
webdunia
webdunia
webdunia

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಕಸಿ ಮಾಡುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿ!

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಕಸಿ ಮಾಡುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿ!
ವಾಷಿಂಗ್ಟನ್ , ಬುಧವಾರ, 20 ಅಕ್ಟೋಬರ್ 2021 (14:44 IST)
ವಾಷಿಂಗ್ಟನ್ : ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡವನ್ನು ಮನುಷ್ಯನ ದೇಹಕ್ಕೆ ಅಳವಡಿಸುವಲ್ಲಿ ಅಮೆರಿಕದ ಸರ್ಜನ್ಗಳು ಯಶಸ್ವಿಯಾಗಿದ್ದಾರೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಹಂದಿಯ ಕಿಡ್ನಿಯನ್ನು ಅಳವಡಿಸಿರುವ ರೋಗಿಯ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ.
ನ್ಯೂಯಾರ್ಕ್ ನಗರದ ಎನ್ವೈಯು ಲ್ಯಾಂಗೋನ್ ಹೆಲ್ತ್ಕೇರ್ ಸೆಂಟರ್ನಲ್ಲಿ ಈ ಪರೀಕ್ಷೆಯನ್ನು ಸರ್ಜನ್ಗಳು ಯಶಸ್ವಿಯಾಗಿ ಮಾಡಿದ್ದಾರೆ. ಹಂದಿಯ ಕಿಡ್ನಿಯನ್ನು ರೋಗಿಗೆ ಅಳವಡಿಸುವ ಮುನ್ನ ಅದರ ಜೀನ್ಸ್ ಅನ್ನು ಬದಲಾವಣೆ ಮಾಡಲಾಯಿತು. ಅದರಿಂದ ವಂಶವಾಹಿಗಳು ಬದಲಾಗಿರುವುದರಿಂದ ಅದರ ಅಂಗಾಂಶಗಳು ಯಾವುದಕ್ಕೂ ತಕ್ಷಣವೇ ವ್ಯತಿರಕ್ತವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಅಂದಹಾಗೆ, ಈ ಕಿಡ್ನಿ ಕಸಿಯಾಗಿರುವ ರೋಗಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಕಿಡ್ನಿ ವೈಫಲ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ನಲ್ಲಿದ್ದ ಅವರ ಲೈಫ್ ಸಪೋರ್ಟ್ ಅನ್ನು ತೆಗೆಯುವ ಮುನ್ನ ಆಕೆಯ ದೇಹವನ್ನು ವೈದ್ಯಕೀಯ ಪ್ರಯೋಗಕ್ಕೆ ಬಳಸಿಕೊಳ್ಳುವಂತೆ ಆ ರೋಗಿಯ ಕುಟುಂಬಸ್ಥರು ಆಸ್ಪತ್ರೆಯ ವೈದ್ಯರಿಗೆ ಅನುಮತಿ ನೀಡಿದ್ದರು.
ಹೀಗಾಗಿ, ಮೆದುಳು ಡೆಡ್ ಆಗಿದ್ದ ರೋಗಿಯ ಕಿಡ್ನಿಯನ್ನು ತೆಗೆದು ಹಂದಿಯ ಕಿಡ್ನಿಯನ್ನು ಅಳವಡಿಸಿ ಆ ಆಸ್ಪತ್ರೆಯ ಸರ್ಜನ್ಗಳು ಪ್ರಯೋಗ ಮಾಡಿದ್ದಾರೆ. ಈ ಪ್ರಯೋಗದ ಬಳಿಕ ಆ ರೋಗಿಯ ಲೈಫ್ ಸಪೋರ್ಟ್ ಅನ್ನು ತೆಗೆಯಲಾಗಿದೆ. ಅದಕ್ಕೂ ಮೊದಲು 3 ದಿನಗಳವರೆಗೆ ಹೊಸ ಮೂತ್ರಪಿಂಡವನ್ನು ಆಕೆಯ ರಕ್ತನಾಳಗಳಿಗೆ ಜೋಡಿಸಲಾಗಿದೆ. ಹಂದಿಯ ಕಿಡ್ನಿಯನ್ನು ಅಳವಡಿಸಿದ ನಂತರ ಆಕೆಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬಂದವು ಎಂಬುದನ್ನು ಪರೀಕ್ಷಿಸಲಾಗಿದೆ. ಹಂದಿಯ ಕಿಡ್ನಿ ಜೋಡಣೆ ಮಾಡಿದ್ದರಿಂದ ಆ ರೋಗಿಯ ದೇಹದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬಂದಿಲ್ಲವಾದ್ದರಿಂದ ಈ ಪ್ರಯೋಗ ಯಶಸ್ವಿಯಾಗಿದೆ ಎಂದೇ ಹೇಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಲರ್‌ಗೆ ಬಿದ್ದು ಬಾಲಕ ಸಾವು