Select Your Language

Notifications

webdunia
webdunia
webdunia
webdunia

ಸೆಲ್ಲರ್‌ಗೆ ಬಿದ್ದು ಬಾಲಕ ಸಾವು

ಸೆಲ್ಲರ್‌ಗೆ ಬಿದ್ದು ಬಾಲಕ ಸಾವು
ಬೆಂಗಳೂರು , ಬುಧವಾರ, 20 ಅಕ್ಟೋಬರ್ 2021 (14:37 IST)
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ ಸೆಲ್ಲರ್‌ಗೆ ಬಿದ್ದು ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೆಲ್ಲರ್‌ಗೆ ಬಿದ್ದು 14 ವರ್ಷದ ಚಂದ್ರು ದುರ್ಮರಣವನ್ನಪ್ಪಿದ್ದಾನೆ. ಆಟವಾಡುವಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಅಂದಾಜಿಸಲಾಗಿದೆ. ಅಂಬೇಡ್ಕರ್ ಆಸ್ಪತ್ರೆಗೆ ಬಾಲಕನ ಮೃತದೇಹ ಸ್ಥಳಾಂತರ ಮಾಡಲಾಗಿದೆ.
ಬಾಲಕ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ. ಟ್ಯಾನರಿ ರಸ್ತೆಯ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ. ತಂದೆ ಮುತ್ತು ಮೇಸ್ತ್ರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ದಸರಾ ಹಿನ್ನಲೆ ಶಾಲೆಗೆ ರಜೆ ಇತ್ತು. ಹೀಗಾಗಿ ಒಂದು ವಾರದಿಂದ ಐವರು ಬಾಲಕರು ಈಜಾಡಲು ಬರುತ್ತಿದ್ದರು. ವಾರದಿಂದ ಮಕ್ಕಳು ಈಜಾಡಲು ಬರುತ್ತಿದ್ದರು ಯಾರೂ ಎಚ್ಚರಿಸಿರಲಿಲ್ಲ. ಇಂದು ಕೂಡ ಬಾಲಕರು ಈಜಾಡಲು ಬಂದಿದ್ದರು. ಈ ವೇಳೆ ಬೇಸ್ಮೆಂಟ್ ನೀರಿನಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ. ಸದ್ಯ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡಲ್ಲಿ ನಿಂತಿರುವ ಮಳೆ ನೀರನ್ನ ತೆರವು ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಟ್ಟಡದ ಬೇಸ್ ಮೆಂಟ್ ನೀರು ತೆರವು ಮಾಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್​ಬುಕ್ ಮರುಬ್ರ್ಯಾಂಡ್ ಆಗಲಿದೆಯಂತೆ!?