ಹೊಸದಿಲ್ಲಿ: ಕಾಬೂಲ್ನಿಂದ ಸ್ಥಳಾಂತರಿಸಲಾದ ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಇಂದು ಬೆಳಿಗ್ಗೆ ತಜಕಿಸ್ತಾನದ ರಾಜಧಾನಿ ದುಶಾನ್ ಬೆ ಮತ್ತು ಕತಾರ್ ನ ದೋಹಾದಿಂದ ದೆಹಲಿಗೆ ಬಂದಿಳಿದವು. ಭಾರತೀಯ ವಾಯುಪಡೆಯ ಮೂರನೇ ವಿಶೇಷ ವಾಪಸಾತಿ ವಿಮಾನ - 107 ಭಾರತೀಯರು ಸೇರಿದಂತೆ 168 ಪ್ರಯಾಣಿಕರನ್ನು ಹೊತ್ತೊಯ್ದು ಕಾಬೂಲ್ನಿಂದ ದೆಹಲಿಗೆ ತೆರಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಕೆಲವು ಚಿತ್ರಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳ ಮೂಲಕ ಸ್ಥಳಾಂತರಿಸುವ ಪ್ರಯತ್ನಗಳ ವಿವರಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಅವರು ಒಂದು ಸಣ್ಣ ವೀಡಿಯೋ ಕ್ಲಿಪ್ ಅನ್ನು ಸಹ ಪೋಸ್ಟ್ ಮಾಡಿದ್ದು, ಅದರಲ್ಲಿ ಸ್ಥಳಾಂತರಿಸಿದವರು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿ ಸಂತಸಪಟ್ಟರು.
ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.