Select Your Language

Notifications

webdunia
webdunia
webdunia
webdunia

ಅಫ್ಘಾನ್ ಸೇನೆಯಿಂದ ಏರ್ಸ್ಟ್ರೈಕ್, 200ಕ್ಕೂ ಅಧಿಕ ತಾಲಿಬಾನಿಯರು ಹತ!

ಅಫ್ಘಾನ್ ಸೇನೆಯಿಂದ ಏರ್ಸ್ಟ್ರೈಕ್, 200ಕ್ಕೂ ಅಧಿಕ ತಾಲಿಬಾನಿಯರು ಹತ!
ಕಬೂಲ್ , ಭಾನುವಾರ, 8 ಆಗಸ್ಟ್ 2021 (13:54 IST)
ಕಬೂಲ್(ಆ.08): ಅಫ್ಘಾನ್ ವಾಯುಪಡೆಯು ಶೆಬರ್ಜೆನ್ ನಗರದಲ್ಲಿ ಏರ್ಸ್ಟ್ರೈಕ್ ನಡೆಸಿ ತಾಲಿಬಾನ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಿಂದ ತಾಲಿಬಾನಿಯರಿಗೆ ಅಪಾಯ ಹಾನಿಯುಂಟಾಗಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.ಈ ದಾಳಿಯಲ್ಲಿ 200 ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಅಧಿಕಾರಿ ಫವಾದ್ ಅಮನ್ ಟ್ವೀಟ್ ಈ ಬಗ್ಗೆ ಮಾತನಾಡಿದ್ದು, "ಶನಿವಾರ ಸಂಜೆ ತಾಲಿಬಾನಿಯರ ಶಿಬಿರಗಳ ಮೇಲೆ ವಾಯುದಾಳಿ ನಡೆಸಿದ್ದು, ಈ ದಾಳಿಯಲ್ಲಿ 200 ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಶೆಬರ್ಜೆನ್ ನಗರದಲ್ಲಿ ಹತರಾಗಿದ್ದಾರೆ. ಈ ದಾಳಿಯಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡುಗಳಿದ್ದ ಶಿಬಿರದ ಮೇಲೆ ದಾಳಿ ನಡೆಸಿದ್ದು, ಉಗ್ರರ 100 ಕ್ಕೂ ಹೆಚ್ಚು ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
ಬಿ -52 ಬಾಂಬರ್ ಶನಿವಾರ ಸಂಜೆ 6.30 ಕ್ಕೆ ಜವಾಜಾನ್ ಪ್ರಾಂತ್ಯದ ಶೆಬರ್ಜೆನ್ ಪಟ್ಟಣದಲ್ಲಿ ತಾಲಿಬಾನ್ ಕೂಟವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದು "ಇಂದು ಸಂಜೆ 6: 30 ಕ್ಕೆ ಜವಾಜಾನ್ ಪ್ರಾಂತ್ಯದ ಶೆಬರ್ಗಾನ್ ನಗರದಲ್ಲಿ ತಾಲಿಬಾನ್ ಕೂಟವನ್ನು ಬಿ -52 ವಿಮಾನವು ಗುರಿಯಾಗಿಸಿಕೊಂಡಿದೆ. ಯುಎಸ್ ವಾಯುಪಡೆಯ ವೈಮಾನಿಕ ದಾಳಿಯ ಪರಿಣಾಮವಾಗಿ ಭಯೋತ್ಪಾದಕರಿಗೆ ಭಾರೀ ಹಾನಿಯಾಗಿದೆ' ಎಂದಿದ್ದಾರೆ.
ಈ ಹಿಂದೆ, ಗಜನಿ ಪ್ರಾಂತೀಯ ಕೇಂದ್ರದ ಹೊರವಲಯದಲ್ಲಿ ಪಾಕಿಸ್ತಾನದ ಭಯೋತ್ಪಾದಕನನ್ನು ಅಫ್ಘಾನ್ ಕಮಾಂಡೋ ಪಡೆ ಬಂಧಿಸಿತ್ತು. ಆತ ಭಯೋತ್ಪಾದಕ ಚಟುವಟಿಕೆ ಮತ್ತು ನಾಗರಿಕರನ್ನು ಕೊಲ್ಲುವುದರಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಕೇಳಿ ಬಂದಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಹೈಡ್ರೋಜನ್ ಎಂಜಿನ್ ಪ್ರಯೋಗಕ್ಕೆ ರೈಲ್ವೆ ನಿರ್ಧಾರ!