Select Your Language

Notifications

webdunia
webdunia
webdunia
webdunia

8 ತಿಂಗಳ ನಂತರ 19ರ ಯುವತಿಯ ರಹಸ್ಯ ಬಯಲು!

8 ತಿಂಗಳ ನಂತರ 19ರ ಯುವತಿಯ ರಹಸ್ಯ ಬಯಲು!
ಬ್ರೆಸಿಲಿಯಾ , ಶುಕ್ರವಾರ, 9 ಸೆಪ್ಟಂಬರ್ 2022 (07:00 IST)
ಬ್ರೆಸಿಲಿಯಾ  : ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ 19 ವರ್ಷದ ಯುವತಿಯೊಬ್ಬಳು ಇಬ್ಬರಿಂದಲೂ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ತಿಳಿಸಿದ್ದಾಳೆ.
 
ಎರಡು ಮಗುವಿನ ತಂದೆ ಯಾರೆಂದು ಪತ್ತೆಹಚ್ಚಲು ಮುಂದಾದ ಯುವತಿ ಡಿಎನ್ಎ ಟೆಸ್ಟ್ ರಿಪೋರ್ಟ್ ಶಾಕ್ ಆಗಿದ್ದಾಳೆ. ತನ್ನ ಇಬ್ಬರು ಮಕ್ಕಳು ವಿಭಿನ್ನ ವ್ಯಕ್ತಿಗಳಿಂದ ಜನಿಸಿರುವ ವಿಚಾರ ತಿಳಿದುಬಂದಿದ್ದು, ಈ ರೀತಿ ಆಗುತ್ತದೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಯುವತಿ ಹೇಳಿದ್ದಾಳೆ.

ಈ ಕುರಿತಂತೆ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ತುಲಿಯೊ ಜಾರ್ಜ್ ಫ್ರಾಂಕೊ ಅವರು ಪ್ರತಿಕ್ರಿಯಿಸಿ, ಈ ರೀತಿಯ ಪ್ರಕರಣಗಳು ಬಹಳ ಅಪರೂಪ. 10 ಲಕ್ಷದಲ್ಲಿ ಒಂದು ಪ್ರಕರಣ ಇಂತಹ ರೀತಿ ಇರುತ್ತದೆ.

ವೈಜ್ಞಾನಿಕವಾಗಿ ಹೇಳುವುದಾದರೇ ಹೆಟೆರೊಪರೆಂಟಲ್ ಸೂಪರ್ಫೆಕಂಡೇಶನ್ ಪ್ರಪಂಚದಾದ್ಯಂತ ಕೇವಲ 20 ಪ್ರಕರಣಗಳಿವೆ. ವಿವಿಧ ವ್ಯಕ್ತಿಗಳ ಅವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡುವ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ ಎಂದು ಹೇಳಿದ್ದಾರೆ.

ಋತುಚಕ್ರದ ಸಮಯದಲ್ಲಿ ಬಿಡುಗಡೆಯಾದ ಎರಡನೇ ಅಂಡಾಣುವು ಪ್ರತ್ಯೇಕ ಲೈಂಗಿಕ ಸಂಭೋಗದಲ್ಲಿ ಬೇರೆ ಪುರುಷರ ವೀರ್ಯ ಕೋಶಗಳಿಂದ ಹೆಚ್ಚುವರಿಯಾಗಿ ಫಲವತ್ತಾದಾಗ ಇದು ಸಂಭವಿಸುತ್ತದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವಿವರಿಸುತ್ತದೆ. 

ಒಂದೇ ತಾಯಿಯಿಂದ ಎರಡು ಮೊಟ್ಟೆಗಳನ್ನು ವಿಭಿನ್ನ ಪುರುಷರು ಫಲವತ್ತಾಗಿಸಿದಾಗ ಇದು ಸಂಭವಿಸಬಹುದು. ಶಿಶುಗಳು ತಾಯಿಯ ಆನುವಂಶಿಕ ವಸ್ತುಗಳನ್ನು ಹಂಚಿಕೊಳ್ಳುತ್ತವೆ, ಆದರೆ ಅವು ವಿಭಿನ್ನ ಜರಾಯುಗಳಲ್ಲಿ ಬೆಳೆಯುತ್ತವೆ ವೈದ್ಯರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು