Select Your Language

Notifications

webdunia
webdunia
webdunia
webdunia

ಫೋಟೋಗೆ ಪೋಜ್‌ ಕೊಡುವ ಹುಚ್ಚಿನಲ್ಲಿ ಸಮುದ್ರ ಪಾಲಾದ ಯುವತಿ

ಫೋಟೋಗೆ ಪೋಜ್‌ ಕೊಡುವ ಹುಚ್ಚಿನಲ್ಲಿ ಸಮುದ್ರ ಪಾಲಾದ ಯುವತಿ
ಬೆಂಗಳೂರು , ಬುಧವಾರ, 20 ಮಾರ್ಚ್ 2019 (19:53 IST)
ಸಮುದ್ರದ ದಂಡೆಯಲ್ಲಿ ನಿಂತು ಫೋಟೋ ಅಥವಾ ಸೆಲ್ಫಿ ತೆಗೆಯುತ್ತಿರುವುದು ನೋಡಿದ್ದೇವೆ. ಸಮುದ್ರದ ನೀರಿನ ಜತೆ ಚೆಲ್ಲಾಟವಾಡುವುದು ಪ್ರತಿಯೊಬ್ಬರಿಗೆ ಸಂತಸ ತರುತ್ತದೆ. ಆದರೆ, ಕೆಲ ಬಾರಿ ಸಮುದ್ರದ ಅಲೆಗಳ ತೀವ್ರತೆ ಎಷ್ಟಿರುತ್ತದೆ ಎಂದರೆ ಕಣ್ಣು ತೆರೆಯುವುದರೊಳಗೆ ಅನಾಹುತ ಸಂಭವಿಸಿರುತ್ತದೆ. 
ಇಂಡೋನೇಷ್ಯಾದ ಡೆವಿಲ್ ಟಿಯರ್ ಪ್ರವಾಸಿ ತಾಣದಲ್ಲಿ ಯುವತಿಯೊಬ್ಬಳು ಸಮುದ್ರದ ದಂಡೆಯಲ್ಲಿ ನಿಂತು ಫೋಟೋಗೆ ಪೋಜ್ ಕೊಡುತ್ತಿದ್ದಾಳೆ. ಈ ಸಂದರ್ಭದಲ್ಲಿ ಭಾರಿ ರಕ್ಕಸ ಗಾತ್ರದ ಅಲೆಯೊಂದು ಅಪ್ಪಳಿಸಿದಾಗ ಆಕೆ ಸಮುದ್ರದೊಳಗೆ ಬಿದ್ದಿದ್ದಾಳೆ. ಕೆಲವೇ ನಿಮಿಷಗಳಲ್ಲಿ ಯುವತಿಯನ್ನು ಸಮುದ್ರ ತನ್ನ ಒಡಲಿಗೆ ಸೆಳೆದುಕೊಂಡಿದೆ. ಸಾವಿರಾರು ಪ್ರವಾಸಿಗರ ಸಮ್ಮುಖದಲ್ಲಿ ನಡೆದ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. 
 
ಭಾರಿ ಅಲೆಗಳು ಬರುತ್ತಿರುವುದು ಕಾಣಿಸಿದಲ್ಲಿ ಪ್ರವಾಸಿಗರು ಸಮುದ್ರದಿಂದ ಸ್ವಲ್ಪ ಮಟ್ಟಿಗೆ ದೂರವಿರುತ್ತಾರೆ. ಆದರೆ, ಫೋಟೋಗೆ ಪೋಜ್ ಕೊಡುವುದರಲ್ಲಿ ಬಿಜಿಯಾಗಿದ್ದ ಮಹಿಳೆಗೆ ಸಮುದ್ರದ ಭಾರಿ ಅಲೆ ಕಾಣಿಸಲೇ ಇಲ್ಲ. ಇದೀಗ ಯುವತಿ ಸಮುದ್ರದ ಸೆಳೆತಕ್ಕೆ ಸಿಲುಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಮೇಲೆ ರೇಪ್ ಎಸಗಿದ ನಕಲಿ ಅಧಿಕಾರಿ