Select Your Language

Notifications

webdunia
webdunia
webdunia
webdunia

ದೇಶದ ಇತಿಹಾಸದಲ್ಲೇ ಇದು ಮೊದಲು: ಜೈಲುಪಾಲಾದ ದಕ್ಷಿಣ ಕೊರಿಯಾ ಹಾಲಿ ಅಧ್ಯಕ್ಷ ಯೂನ್‌ ಸುಕ್‌

President Yoon Suk Yeol

Sampriya

ಸಿಯೋಲ್ , ಬುಧವಾರ, 15 ಜನವರಿ 2025 (15:11 IST)
Photo Courtesy X
ಸಿಯೋಲ್: ದಕ್ಷಿಣ ಕೊರಿಯಾ ದೇಶದ ಹಾಲಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರನ್ನು ಕಾನೂನು ಜಾರಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಇದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಅಧ್ಯಕ್ಷರ ಬಂಧನವಾಗಿದೆ. ಈ ತಿಂಗಳ ಆರಂಭದಲ್ಲಿ ನಡೆದ ವಿಫಲ ಪ್ರಯತ್ನದ ನಂತರ ಈ ಬಂಧನ ನಡೆದಿದೆ. ಕಳೆದ ತಿಂಗಳು ಅಲ್ಪಾವಧಿಗೆ ಮಾರ್ಷಲ್‌ ಲಾ ಹೇರಿದ್ದಕ್ಕಾಗಿ ಯೂನ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.

ಅಧಿಕಾರ ವ್ಯಾಪ್ತಿ ಮೀರಿದ ಮತ್ತು ಮಾರ್ಷಲ್‌ ಲಾ ಅನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು. ತಮ್ಮ ವಿರುದ್ಧದ ಭಿನ್ನಾಭಿಪ್ರಾಯ ನಿಗ್ರಹಿಸಲು ಪ್ರಯತ್ನಿಸಿದ ಆರೋಪದ ಮೇಲೆ ಯೂನ್ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಇದನ್ನು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ವ್ಯಾಪಕವಾಗಿ ಖಂಡಿಸಲಾಯಿತು.

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಬಂಧನಕ್ಕಾಗಿ ಅವರ ನಿವಾಸಕ್ಕೆ ಬುಧವಾರ ಮುಂಜಾನೆ ಸಾವಿರಕ್ಕೂ ಹೆಚ್ಚು ಭ್ರಷ್ಟಾಚಾರ ನಿಗ್ರಹ ತನಿಖಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ತೆರಳಿ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Madhya Pradesh: ಮದುವೆ ಹಿಂದಿನ ದಿನ ಪೊಲೀಸರ ಎದುರೇ ಮದುಮಗಳನ್ನುಗುಂಡಿಕ್ಕಿ ಕೊಂದ ತಂದೆ