Select Your Language

Notifications

webdunia
webdunia
webdunia
webdunia

ಉಕ್ರೇನ್ನ 4 ಪ್ರದೇಶಗಳು ರಷ್ಯಾ ವಶ : ಪುಟಿನ್

ಉಕ್ರೇನ್ನ 4 ಪ್ರದೇಶಗಳು ರಷ್ಯಾ ವಶ : ಪುಟಿನ್
ಮಾಸ್ಕೋ , ಶನಿವಾರ, 1 ಅಕ್ಟೋಬರ್ 2022 (08:25 IST)
ಮಾಸ್ಕೋ : ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ. ಈ ಪ್ರದೇಶಗಳು ಶಾಶ್ವತವಾಗಿ ರಷ್ಯಾ ಪಾಲಾಗಲಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ.

ಕ್ರೆಮ್ಲಿನ್ ಸಭಾಂಗಣದಲ್ಲಿ ಈ ಕುರಿತು ಮಾತನಾಡಿದ ಅವರು, ಉಕ್ರೇನ್ನ ಸುಮಾರು ಶೇ.15 ರಷ್ಟು ಭೂಭಾಗವಿರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದು 2ನೇ ವಿಶ್ವ ಯುದ್ಧದ ನಂತರ ಯೂರೋಪ್ನಲ್ಲಿಯೇ ಅತಿ ದೊಡ್ಡ ಸ್ವಾಧೀನವಾಗಿದೆ ಎಂದು ತಿಳಿಸಿದ್ದಾರೆ.

ಉಕ್ರೇನ್ನ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಪುಟಿನ್ ಜೀವನಕ್ಕಿಂತ ಹೆಚ್ಚು ಯುದ್ಧವನ್ನೇ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರಿಂದ ಅಂಕಿತ