Select Your Language

Notifications

webdunia
webdunia
webdunia
webdunia

ರಷ್ಯಾ ಉಕ್ರೇನ್ ಯುದ್ಧ ತೀವ್ರತೆಗೆ ಸಾಕ್ಷಿ ಈ ಫೋಟೋ

ರಷ್ಯಾ ಉಕ್ರೇನ್ ಯುದ್ಧ ತೀವ್ರತೆಗೆ ಸಾಕ್ಷಿ ಈ ಫೋಟೋ
ಬೆಂಗಳೂರು , ಸೋಮವಾರ, 26 ಸೆಪ್ಟಂಬರ್ 2022 (14:33 IST)
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಇದರ ನಡುವೆ ಮರಿಯುಪೋಲ್ ಮುತ್ತಿಗೆಯ ಸಮಯದಲ್ಲಿ ಸೆರೆಹಿಡಿಯಲಾದ ಉಕ್ರೇನ್​ ಸೈನಿಕರೊಬ್ಬರ ಆಘಾತಕಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
 
ಫೆಬ್ರವರಿ 24ರಂದು ಆರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ಧವು ಇಂದಿಗೆ (ಸೆಪ್ಟೆಂಬರ್​ 25) 214 ದಿನಗಳಿಗೆ ಕಾಲಿಟ್ಟಿದೆ. ಮರಿಯುಪೋಲ್‌ನಲ್ಲಿ ರಷ್ಯಾ ಸೇನೆಯೊಂದಿಗೆ ಹೋರಾಟದಲ್ಲಿ ಬಂಧಿಸಲ್ಪಟ್ಟಿದ್ದ 205 ಉಕ್ರೇನಿಯನ್ ಯುದ್ಧ ಕೈದಿಗಳನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಒಬ್ಬರಾದ ಯೋಧ ಮೈಖೈಲೋ ಡಯಾನೋವ್ ಕುರಿತ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
 
ಮೇ ತಿಂಗಳಲ್ಲಿ ಬಂದರು ನಗರವಾದ ಮರಿಯುಪೋಲ್‌ನಲ್ಲಿ ಕೈಗಾರಿಕಾ ಪ್ರದೇಶಗಳ ಮೇಲೆ ರಷ್ಯಾದ ಮುತ್ತಿಗೆಯ ಸಮಯದಲ್ಲಿ ಇದೇ ಮೈಖೈಲೋ ಡಯಾನೋವ್ ತೋಳಿಗೆ ಗಾಯವಾಗಿದ್ದರೂ ನಗು ಮುಖದಲ್ಲಿರುವ ಫೋಟೋ ವೈರಲ್ ಆಗಿತ್ತು. ಆದರೆ, ಡಯಾನೋವ್ ಅವರ ಹೊಸ ಫೋಟೋ ಬೆಚ್ಚಿ ಬೀಳಿಸುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನದಹಬ್ಬದಲ್ಲಿ ಬಿಗಿ ಪೊಲೀಸ್ ಭದ್ರತೆ