Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ಉಕ್ರೇನ್ ಮೇಲೆ ರಷ್ಯಾ ದಾಳಿ!

ಸ್ವಾತಂತ್ರ್ಯೋತ್ಸವ
ಕೀವ್ : ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದ ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್ನ ರೈಲ್ವೇ ನಿಲ್ದಾಣದ ಮೇಲೆ ನಡೆದ ರಾಕೆಟ್ ದಾಳಿಗೆ 22ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
 
ಕಳೆದ 6 ತಿಂಗಳ ಹಿಂದೆ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದೆ. ಉಕ್ರೇನ್ನ ಪ್ರತಿಹೋರಾಟದ ನಡುವೆ ಕೀವ್ ಸೇರಿದಂತೆ ಕೆಲ ನಗರಗಳು ಉಳಿದುಕೊಂಡಿದ್ದು, ರಷ್ಯಾ ಸೈನ್ಯ ಆಗಾಗ ಸಣ್ಣಪುಟ್ಟ ದಾಳಿ ಮಾಡುತ್ತಿವೆ. 

ಸೋವಿಯತ್ ಅಳ್ವಿಕೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಉಕ್ರೇನ್ಗೆ ನಿನ್ನೆ ಸ್ವಾತಂತ್ರೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿದ್ದಾಗ ರೈಲ್ವೇ ನಿಲ್ದಾಣದ ಮೇಲೆ ರಷ್ಯಾ ಸೈನ್ಯ ದಾಳಿ ನಡೆಸಿ 22ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಮಾಹಿತಿ ಹಂಚಿಕೊಂಡಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಚುನಾವಣಾ 2022 ರ ಕರಡು ಮತದಾರರ ಪಟ್ಟಿ ಪ್ರಕಟ