Select Your Language

Notifications

webdunia
webdunia
webdunia
webdunia

ಪ್ರಜೆಗಳಿಗೆ 1 ವರ್ಷ ಮಿಲಿಟರಿ ಸೇವೆ ಕಡ್ಡಾಯ

ಪ್ರಜೆಗಳಿಗೆ 1 ವರ್ಷ ಮಿಲಿಟರಿ ಸೇವೆ ಕಡ್ಡಾಯ
ನವದೆಹಲಿ , ಶನಿವಾರ, 31 ಡಿಸೆಂಬರ್ 2022 (12:28 IST)
ತೈಪೆ : ಚೀನಾ 71 ಯುದ್ಧ ವಿಮಾನಗಳನ್ನು ಹಾರಿಸಿದ ಬೆನ್ನಲ್ಲೇ ತೈವಾನ್ ತನ್ನ ಪ್ರಜೆಗಳಿಗೆ ಮಿಲಿಟರಿ ಸೇವೆಯನ್ನು ಒಂದು ವರ್ಷ ಕಡ್ಡಾಯ ಮಾಡಿದೆ.

ಚೀನಾದಿಂದ ಬೆದರಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯ ಮಿಲಿಟರಿ ಸೇವೆಯನ್ನು ನಾಲ್ಕು ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸುವುದಾಗಿ ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್ ಹೇಳಿದ್ದಾರೆ.

ಯಾರೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಶಾಂತಿ ಆಕಾಶದಿಂದ ಬೀಳುವುದಿಲ್ಲ. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಪ್ರಸ್ತುತ ಇರುವ ನಾಲ್ಕು ತಿಂಗಳ ತರಬೇತಿ ಸಾಲುವುದಿಲ್ಲ ಎಂದು ತಿಳಿಸಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಿ ಪ್ರಯಾಣಿಕರಿಗೆ ಹೊಸ ಗೈಡ್‍ಲೈನ್