Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲೂ ‘ಆರ್​​ಆರ್​ಆರ್’ ಸಿನಿಮಾ ಅಬ್ಬರ!

ಅಮೆರಿಕದಲ್ಲೂ ‘ಆರ್​​ಆರ್​ಆರ್’ ಸಿನಿಮಾ ಅಬ್ಬರ!
ಮುಂಬೈ , ಭಾನುವಾರ, 21 ನವೆಂಬರ್ 2021 (08:52 IST)
ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಬೇರೆ ರಾಜ್ಯ ಮತ್ತು ದೇಶಗಳಲ್ಲೂ ಅವರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
‘ಬಾಹುಬಲಿ’ ಬಳಿಕ ಅವರು ನಿರ್ದೇಶನ ಮಾಡಿರುವ ‘ಆರ್ಆರ್ಆರ್’ ಚಿತ್ರ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಆರ್ಆರ್ಆರ್’ ಚಿತ್ರ ಜ.7ರಂದು ಅದ್ದೂರಿಯಾಗಿ ವಿಶ್ವಾದ್ಯಂತ ತೆರೆಕಾಣಲಿದೆ. ಹಾಗಾದರೆ ಎಷ್ಟು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ ಎಂಬ ಕೌತುಕ ಎಲ್ಲರಲ್ಲೂ ಇದೆ. ಭಾರತದಲ್ಲಿ ‘ಆರ್ಆರ್ಆರ್’ ಚಿತ್ರ ಎಲ್ಲ ಥಿಯೇಟರ್ಗಳನ್ನು ಆಕ್ರಮಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಅಚ್ಚರಿ ಎಂದರೆ, ಅಮೆರಿಕದಲ್ಲೂ ಈ ಚಿತ್ರಕ್ಕೆ ಸಾವಿರಾರು ಸ್ಕ್ರೀನ್ಗಳು ಮೀಸಲಾಗಿವೆ.
ಅಮೆರಿಕದಲ್ಲಿ ‘ಸಿನಿಮಾರ್ಕ್ ಮಲ್ಟಿಪ್ಲೆಕ್ಸ್’ ದೊಡ್ಡ ಉದ್ಯಮವಾಗಿದೆ. ಬಹುತೇಕ ಎಲ್ಲ ‘ಸಿನಿಮಾರ್ಕ್ ಮಲ್ಟಿಪ್ಲೆಕ್ಸ್’ಗಳಲ್ಲೂ ‘ಆರ್ಆರ್ಆರ್’ ಚಿತ್ರವನ್ನು ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ. 288 ಮಲ್ಟಿಪ್ಲೆಕ್ಸ್ಗಳನ್ನೂ ಸೇರಿ ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಭಾರತೀಯ ಸಿನಿಮಾಕ್ಕೆ ಅಮೆರಿಕದಲ್ಲಿ ಈ ಪರಿ ಓಪನಿಂಗ್ ಸಿಗುತ್ತಿರುವುದು ನೋಡಿ ಎಲ್ಲರೂ ಕಣ್ಣರಳಿಸುತ್ತಿದ್ದಾರೆ.
ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಹಾಡುಗಳು ಸದ್ದು ಮಾಡುತ್ತಿವೆ. ಇತ್ತೀಚೆಗೆ ಈ ಸಿನಿಮಾದಿಂದ ಹೊಸದೊಂದು ಲಿರಿಕಲ್ ಸಾಂಗ್ ರಿಲೀಸ್ ಆಯಿತು. ‘ನಾಟು ನಾಟು..’ ಗೀತೆಯು 5 ಭಾಷೆಗಳಲ್ಲಿ ಮೂಡಿಬಂದಿದೆ. ಕನ್ನಡ ವರ್ಷನ್ ‘ಹಳ್ಳಿ ನಾಟು..’ ಹಾಡು ಕೂಡ ಭರ್ಜರಿ ಸೌಂಡು ಮಾಡುತ್ತಿದೆ. ಡ್ಯಾನ್ಸ್ ವಿಚಾರದಲ್ಲಿ ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಒಬ್ಬರಿಗೊಬ್ಬರು ಪೈಪೋಟಿ ನೀಡಿದ್ದಾರೆ. ಅಭಿಮಾನಿಗಳಿಂದ ಈ ಗೀತೆಗೆ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

‘ಕೆಜಿಎಫ್ 2’ : ರಿಲೀಸ್ ದಿನಾಂಕ ಮುಂದೂಡಿದ ನಟ!