Webdunia - Bharat's app for daily news and videos

Install App

ಗಂಡನ ಪೋಸ್ಟ್ಗೆ ಲೈಕ್ಸ್ ಸಹಿಸದ ಪತ್ನಿ ಮಾಡಿದ ಕೆಲಸ!

Webdunia
ಗುರುವಾರ, 28 ಅಕ್ಟೋಬರ್ 2021 (20:13 IST)
ವಡೋದರಾ  : ಈ ಸೋಶಿಯಲ್ ಮೀಡಿಯಾದ ಹುಚ್ಚು ಎಂತೆಂಥ ಸಂಕಷ್ಟ ತಂದಿಡುತ್ತದೆ ಎನ್ನುವುದಕ್ಕೆ ಈ ಘಟನೆಗಿಂತ ಬೇರೆ ಸಾಕ್ಷಿ ಬೇಕಿಲ್ಲ.
ಲೈಕ್ ಮತ್ತು ಕಮೆಂಟ್ಸ್ ಗಳ ಹಪಹಪಿ ಗಲಾಟೆ ಜಗಳಕ್ಕೆ ಕಾರಣವಾಗುವುದು ಹೊಸದೇನಲ್ಲ.
ಗುಜರಾತ್ನ ವಡೋದರಾದಿಂದ ಇಂಥದ್ದೆ ಪ್ರಕರಣ ವರದಿಯಾಗಿದೆ.  ಲೈಕ್ಸ್ ವಿಚಾರದಲ್ಲಿ ಗಂಡ  ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಪ್ರತ್ಯೇಕ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹೊಂದುವುದು ಸಾಮಾನ್ಯ ಬಿಡಿ. ಗಂಡನ ಪೋಸ್ಟ್ ಗಳಿಗೆ ಹೆಚ್ಚಿನ ಲೈಕ್ಸ್ ಬರುತ್ತಿದ್ದ ಕಾರಣ ಹೆಂಡತಿಗೆ ಅಸೂಹೆ ಆರಂಭವಾಗಿದೆ.  ಅದರಲ್ಲೂ ಮಹಿಳೆಯರು ಗಂಡನ ಪೋಸ್ಟ್ ಗೆ ಲೈಕ್ ಒತ್ತುತ್ತಿದ್ದುದ್ದು ಪತ್ನಿಯನ್ನು ಕೆರಳಿಸಿದೆ.  ಅಪ್ ಲೋಡ್ ಮಾಡಿ ನಿಮಿವಾಗುವುದರೊಳಗೆ ಗಂಡನ ಪೋಸ್ಟ್ ಗೆ ಸಾಕಷ್ಟು ಲೈಕ್ ಬರುತ್ತಿದ್ದವು.
ಅಸೂಹೆ ಪರಿಣಾಮ ಮಹಿಳೆ ತಾಳ್ಮೆ ಕಳೆದುಕೊಂಡು  ಗಂಡನ ಮೊಬೈಲ್ ಕಸಿದುಕೊಂಡಿದ್ದಾಳೆ.   ಇದರಿಂದ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಈ ವೇಳೆ ಗಂಡ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನುವುದು ಮಹಿಳೆಯ ಆರೋಪ. ಇದಾದ ನಂತರ ಮಹಿಳೆ ಅಭಯಂ ಸಹಾಯವಾಣಿಗೆ ಕರೆ ಮಾಡಿ, ಪತಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

International Women's Day: ನಿಮ್ಮ ಜೀವನದ ವಿಶೇಷ ಮಹಿಳೆಗೆ ಈ ರೀತಿ ಗಿಫ್ಟ್ ಮಾಡಿ

ಬೇಸಿಗೆಯಲ್ಲಿ ಮೈ ಕೈ ನೋವಾಗುತ್ತಿದೆಯೇ ಇದಕ್ಕೆ ಈ ಕಾರಣವೂ ಇರಬಹುದು

ಬೇಸಿಗೆಯಲ್ಲಿ ನುಗ್ಗೆಕಾಯಿ ಸೇವನೆ ಮಾಡಬಹುದೇ

ಬೆಳಿಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಅನೇಕ ಪ್ರಯೋಜನ

ನಿಮ್ಮ ಆಹಾರದಲ್ಲಿ ಇದು ಇದ್ದರೆ ಹೀಮೋಗ್ಲೋಬಿನ್ ಸಮಸ್ಯೆಗೆ ಸಿಗುತ್ತೆ ಮುಕ್ತಿ

ಮುಂದಿನ ಸುದ್ದಿ
Show comments