Select Your Language

Notifications

webdunia
webdunia
webdunia
webdunia

ಟ್ಯಾಂಪೂನ್ ಬಳಸುವ ಮಹಿಳೆಯರೇ ಎಚ್ಚರ

ಟ್ಯಾಂಪೂನ್ ಬಳಸುವ ಮಹಿಳೆಯರೇ ಎಚ್ಚರ
ಬೆಂಗಳೂರು , ಬುಧವಾರ, 10 ಏಪ್ರಿಲ್ 2019 (09:16 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದನ್ನು ಗುಪ್ತಾಂಗದೊಳಗೆ ಇಡೀ ದಿನ ಇಟ್ಟುಕೊಂಡರೆ ನಾನಾ ಸೊಂಕು ತಗಲುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.


ಹೌದು. ಟ್ಯಾಂಪೂನ್ ಬಳಕೆಯಿಂದ ಶೇ. 10ರಷ್ಟು ಮಹಿಳೆಯರಲ್ಲಿ ಗುಪ್ತಾಂಗ ಸೊಂಕು ಕಾಣಿಸಿಕೊಂಡಿದೆ. ಆದ್ದರಿಂದ  ವೈದ್ಯರು ಅಗತ್ಯವಿದ್ದರೆ ಮಾತ್ರ ಟ್ಯಾಂಪೂನ್ ಬಳಸಿ ಇಲ್ಲವಾದರೆ ಸಾನಿಟರಿ ನ್ಯಾಪ್ ಕೀನ್ ಬಳಸುವಂತೆ ತಿಳಿಸಿದ್ದಾರೆ. ಹಾಗೇ ಟ್ಯಾಂಪೂನ್ ಬಳಕೆ ಬಗ್ಗೆ ತರಬೇತಿ ಮತ್ತು ಅದರ ಪೂರ್ತಿ ಜ್ಞಾನ ಇದ್ದರೆ ಮಾತ್ರ ಬಳಸುವುದು ಸೂಕ್ತ. ಪ್ರತಿ ಮೂರು ಗಂಟೆಗೊಮ್ಮೆ ಅದನ್ನು ಬದಲಾಯಿಸುತ್ತಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.


ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಟ್ಯಾಂಪೂನ್ ಬಳಕೆ ಹೆಚ್ಚುತ್ತಿದೆ. ಅಲ್ಲಿ ಇದರಿಂದ ಭ್ರೂಣ ಅಸ್ವಸ್ಥತೆಯಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ. ಯೋನಿಯ ಎಡಗಡೆ ಈ ಟ್ಯಾಂಪೂನ್ ನನ್ನು ದೀರ್ಘಾವಧಿವರೆಗೆ ಬಳಸಿದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೀರ್ಘಾವಧಿವರೆಗೆ ಇದರ ಬಳಕೆ ಮಾಡಿದರೆ ಗುಪ್ತಾಂಗಕ್ಕೆ ಸೊಂಕು ತಗುಲಿ, ತುರಿಕೆ, ಉರಿ ಮತ್ತು ಬಿಳಿದ್ರವ ಸೋರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ತಂಗಿ ಜೊತೆಗೆ ಒನ್ ಸೈಡ್ ಲವ್