Select Your Language

Notifications

webdunia
webdunia
webdunia
webdunia

ವರ್ತಕನ ತಲೆ ಸೇರಿದ್ದ ಬುಲೆಟ್ ಹೊರಕ್ಕೆ!

ವರ್ತಕನ ತಲೆ ಸೇರಿದ್ದ ಬುಲೆಟ್ ಹೊರಕ್ಕೆ!
ಕಲಬುರಗಿ , ಮಂಗಳವಾರ, 29 ಜನವರಿ 2019 (17:23 IST)
ಚಿನ್ನಾಭರಣ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಕನ ತಲೆಯಲ್ಲಿಯೇ ಉಳಿದುಕೊಂಡಿದ್ದ ಬುಲೆಟ್ ಹೊರತೆಗೆಯಲಾಗಿದೆ.

ಸ್ಕ್ಯಾನಿಂಗ್ ವೇಳೆ ಬುಲೆಟ್ ತಲೆಯಲ್ಲಿರುವುದು ಪತ್ತೆಯಾಗಿದ್ದು, ಅದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಬುಲೇಟ್ ಹೊರ ತೆಗೆದ ವೈದ್ಯರು ಜೀವ ಉಳಿಸುವಲ್ಲಿ ಸಫಲರಾಗಿದ್ದಾರೆ.

ಮೆದುಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಒಂದು ಮೂಳೆ ಮುರಿತವಾಗಿದ್ದು, ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಗಾಯಾಳು ವಿಜಯಕುಮಾರ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಮ್ ಮಾಹಿತಿ ನೀಡಿದ್ದಾರೆ.

ವಿಜಯಕುಮಾರ್ ಗೆ  ಚಿಕಿತ್ಸೆ ಮುಂದುವರಿದಿದೆ. ಚಿನ್ನಾಭರಣ ಖರೀದಿಯ ನೆಪದಲ್ಲಿ ಇಬ್ಬರು ದುಷ್ಕರ್ಮಿಗಳಿಂದ ಏಕಾಏಕಿ ಗುಂಡಿನ ದಾಳಿ ನಡೆದಿತ್ತು. ಕಲಬುರಗಿಯ ಕಮಲಾಪುರ ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದ್ದ ಘಟನೆಯಲ್ಲಿ ವರ್ತಕ ವಿಜಯಕುಮಾರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಪಿಡಿಒನನ್ನು ಥಳಿಸಿದ ಗ್ರಾಮ‌ ಪಂಚಾಯತ್ ಮಹಿಳಾ ಸದಸ್ಯರು!