Publish Date: Wed, 13 Mar 2019 (12:27 IST)
Updated Date: Wed, 13 Mar 2019 (16:08 IST)
ಬೆಂಗಳೂರು: ಪತ್ನಿ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನುತ್ತಾಳೆ ಎಂದರೆ ಅದಕ್ಕೆ ಹಲವು ವಿಚಾರಗಳು ಕಾರಣವಾಗುತ್ತವೆ. ಅದರಲ್ಲೂ ಈ ಎರಡು ಕಾರಣಗಳು ಮುಖ್ಯ.
ಅವ ಏನಂದುಕೊಳ್ತಾನೋ?
ಏಕಾಂತದಲ್ಲಿದ್ದಾಗ ಪತಿ ಜತೆ ದೈಹಿಕ ವಾಂಛೆ ತೀರಿಸಿಕೊಳ್ಳುವ ಬಯಕೆಯಿದ್ದರೂ ತನ್ನ ವರ್ತನೆಯಿಂದ ಆತ ತನ್ನ ಬಗ್ಗೆ ಏನಂದುಕೊಳ್ಳುವನೋ ಎಂಬ ಒಂದು ರೀತಿಯ ಆತಂಕ ಮಹಿಳೆಯರಿಗಿರುತ್ತದೆ. ಈ ತಪ್ಪು ಕಲ್ಪನೆಯಿಂದಲೇ ತಾನು ಸುಖ ಕೊಡುವವಳು ಮಾತ್ರ ಆಗುತ್ತಾಳೆ. ತನಗೇನು ಬೇಕೋ ಅದನ್ನು ಕೇಳಿ ಪಡೆಯುವ ಧೈರ್ಯ ಮಾಡುವುದಿಲ್ಲ.
ಮಾನಸಿಕ ದ್ವಂದ್ವಗಳು
ಕೆಲವೊಮ್ಮೆ ಮನೆಯವರ ಒತ್ತಾಯಕ್ಕೆ ಆದ ಮದುವೆಯಿಂದಲೂ ಮಹಿಳೆಯರು ಸೆಕ್ಸ್ ಬಗ್ಗೆ ಆಸಕ್ತಿ ತೋರದೇ ಇರಬಹುದು. ಪತಿಯ ಬಗ್ಗೆ ಒಲವು ಇಲ್ಲದೇ ಇದ್ದಾಗ ಅಥವಾ ಜೀವನದಲ್ಲಿ ದೈಹಿಕವಾಗಿ ತೆರೆದುಕೊಳ್ಳಲು ಬೇಕಾದಂತಹ ವಾತಾವರಣವಿಲ್ಲದೇ ಇದ್ದಾಗ ಮಹಿಳೆಯರಿಗೆ ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ ಮೂಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.