Select Your Language

Notifications

webdunia
webdunia
webdunia
webdunia

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

Heart

Krishnaveni K

ಬೆಂಗಳೂರು , ಗುರುವಾರ, 18 ಏಪ್ರಿಲ್ 2024 (12:54 IST)
ಬೆಂಗಳೂರು: ಬೇಸಿಗೆಗಾಲ ಬಂತೆಂದರೆ ಹಲವು ರೋಗಗಳೂ ಜೊತೆಗೇ ಬರುತ್ತವೆ. ಅದರಲ್ಲೂ ಬೇಸಿಗೆಗಾಲದಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗ ಬರುವ ಸಾಧ‍್ಯತೆ ಹೆಚ್ಚು ಎನ್ನಲಾಗುತ್ತದೆ. ಅದಕ್ಕೆ ಕಾರಣವೇನು ತಿಳಿದುಕೊಳ್ಳಿ.

ಬೇಸಿಗೆಯ ಬಿರು ಬಿಸಿಲಿಗೆ ನಮ್ಮ ದೇಹ ಹೊಂದಿಕೊಳ್ಳಲು ಕಷ್ಟಪಡುತ್ತದೆ. ನಿರ್ಜಲೀಕರಣ, ಸುಸ್ತು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತೇವೆ. ದೇಹಕ್ಕೆ ಎಷ್ಟು ನೀರಿನಂಶ ಸೇರಿಸಿದರೂ ಕಡಿಮೆಯೇ. ಬೇಸಿಗೆಗಾಲದಲ್ಲಿ ರಕ್ತ ಪಂಪ್ ಆಗಲು ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ.

ಹೀಗಾಗಿ ಈ ಸಮಯದಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಬರುವುದು ಹೆಚ್ಚು. ಅಷ್ಟೇ ಅಲ್ಲ, ಇದೇ ಕಾರಣಕ್ಕೆ ನಾವು ಬೇಗ ಸುಸ್ತಾಗುತ್ತೇವೆ. ಹೀಗಾಗಿಯೇ ಬೇಸಿಗೆಗಾಲದಲ್ಲಿ ಆದಷ್ಟು ಉರಿಬಿಸಿಲಿಗೆ ಅಡ್ಡಾಡುವುದನ್ನು ತಪ್ಪಿಸಿ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುವಂತೆ ನೋಡಿಕೊಳ್ಳಿ.

ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಅಧಿಕ ಹೀಟ್ ಇರುವ ಆಹಾರ ವಸ್ತುಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಬದಲಾಗಿ ದೇಹಕ್ಕೆ ತಂಪು ನೀಡುವ ಆಹಾರ, ಪಾನೀಯಗಳನ್ನು ಸೇವಿಸುವ ಮೂಲಕ ನಮ್ಮ ಹೃದಯ ಮತ್ತು ಇಡೀ ದೇಹದ ಆರೋಗ್ಯ ಕಾಪಾಡಿಕೊ‍ಳ್ಳುವುದರತ್ತ ಗಮನಹರಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದನೆಯ ಉಗುರು ಬೇಕಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ