Select Your Language

Notifications

webdunia
webdunia
webdunia
webdunia

ಖಾರದ ವಸ್ತು ಮುಟ್ಟಿದರೆ ಕೈ ಉರಿಯದಂತೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

Red Chilly

Krishnaveni K

ಬೆಂಗಳೂರು , ಶನಿವಾರ, 13 ಏಪ್ರಿಲ್ 2024 (10:14 IST)
ಬೆಂಗಳೂರು: ಮೆಣಸಿನಕಾಯಿ, ಮೆಣಸಿನ ಪೌಡರ್ ಅಥವಾ ಇನ್ಯಾವುದೇ ಖಾರದ ವಸ್ತುಗಳನ್ನು ಮುಟ್ಟಿದರೆ ಕೈಗಳು ಸ್ವಲ್ಪ ಹೊತ್ತು ಉರಿಯುವುದು ಸಾಮಾನ್ಯ. ಕೈ ಉರಿಯುವುದಕ್ಕೆ ಸಿಂಪಲ್ ಮನೆ ಮದ್ದು ಏನೆಂದು ನೋಡೋಣ.

ಚಿಕ್ಕ ಮಗುವಿನ ಅಮ್ಮಂದಿರಿಗೆ ಅಡುಗೆ ಮಾಡುವಾಗ ಖಾರದ ವಸ್ತು ಮುಟ್ಟುವುದೇ ದೊಡ್ಡ ತಲೆನೋವು. ಅದೇ ಕೈಯಿಂದ ಪುಟ್ಟ ಮಗುವನ್ನು ಎತ್ತಿಕೊಂಡರೆ ಎಲ್ಲಿ ಅದಕ್ಕೂ ಉರಿಯಾಗುತ್ತದೋ ಎನ್ನುವ ಚಿಂತೆ. ನಮಗೂ ಅಷ್ಟೇ, ಹಸಿಮೆಣಸಿನಕಾಯಿ ಅಥವಾ ಇನ್ಯಾವುದೇ ಖಾರದ ವಸ್ತು ಮುಟ್ಟಿದಾಗ ಕೈಗಳು ಉರಿಯುತ್ತದೆ.

ಇದನ್ನು ತಡೆಯಲು ಸಿಂಪಲ್ ಮನೆ ಮದ್ದು ಎಂದರೆ ಕೊಬ್ಬರಿ ಎಣ್ಣೆ. ಯಾವುದಾದರೂ ಖಾರದ ವಸ್ತುವನ್ನು ಮುಟ್ಟಿಕೊಂಡ ತಕ್ಷಣ ಕೊಬ್ಬರಿ ಎಣ್ಣೆಯನ್ನು ಕೈಗಳಿಗೆ ಹಚ್ಚಿ ಬಳಿಕ ಸೋಪ್ ನಿಂದ ಚೆನ್ನಾಗಿ ಕೈ ತೊಳೆದುಕೊಳ್ಳಿ. ಇದರಿಂದ ನಿಮಗೂ ಉರಿ ಕಡಿಮೆಯಾಗುತ್ತದೆ.

ಇದಲ್ಲದೇ ಹೋದರೆ ಮನೆಯಲ್ಲಿ ಮಜ್ಜಿಗೆಯಿದ್ದರೆ ಅದರಿಂದ ಕೈ ತೊಳೆದುಕೊಂಡು ಬಳಿಕ ಸೋಪ್ ನಿಂದ ಚೆನ್ನಾಗಿ ಕೈ ತೊಳೆದುಕೊಳ್ಳಬಹುದು. ಮಜ್ಜಿಗೆಯಲ್ಲಿರುವ ಸಿಟ್ರಿಕ್ ಅಂಶ ಕೈ ಉರಿಯದಂತೆ ನೋಡಿಕೊಳ್ಳುತ್ತದೆ. ಮಾಡಿ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಉಳಿದ ಅನ್ನ ಸೇವಿಸಲೇ ಬೇಕೆಂದರೆ ಈ ಟ್ರಿಕ್ ಪಾಲಿಸಿ