ಬೆಂಗಳೂರು: ಕೆಲವರಿಗೆ ಕಿವಿ ಪದೇ ಪದೇ ತುರಿಕೆಯಾಗುತ್ತಿರುತ್ತದೆ. ಇದರಿಂದಾಗಿ ಸದಾ ಕಿವಿಯೊಳಗೆ ಕೈ ತೂರಿಸಿಕೊಂಡು ಕೂರುತ್ತಾರೆ. ಇದೊಂದು ಥರಾ ಕಿರಿ ಕಿರಿಯೇ ಸರಿ. ಹಾಗಿದ್ದರೆ ಕಿವಿ ತುರಿಕೆಗೆ ಕಾರಣಗಳೇನು ನೋಡೋಣ.
ಸಾಮಾನ್ಯವಾಗಿ ಶೀತವಾದಾಗ ಕಿವಿ ತುರಿಕೆಯಾಗುವುದು ಸಹಜ. ಅದರ ಹೊರತಾಗಿಯೂ ಕಿವಿ ತುರಿಕೆಯಾಗುತ್ತಿದೆ ಎಂದಾದರೆ ಏನೋ ಸಮಸ್ಯೆಯಾಗಿದೆ ಎಂದೇ ಅರ್ಥ. ಅಂತಹ ಸಮಸ್ಯೆಯನ್ನು ಕಡೆಗಣಿಸುವಂತೆಯೇ ಇಲ್ಲ. ಯಾಕೆಂದರೆ ಇನ್ನು ಕಡೆಗಣಿಸಿದರೆ ಮುಂದೆ ಗಂಭೀರ ಸಮಸ್ಯೆಗಳು ಎದುರಾಗಬಹುದು.
ಕಿವಿ ತುರಿಕೆಯಾಗುತ್ತಿದೆ ಎಂದರೆ ಕಿವಿಯೊಳಗೆ ಏನೋ ಅಲರ್ಜಿ ಆಗಿರಬಹುದು. ಅಥವಾ ಕಿವಿಯ ಮೇಣದ ಸಂಗ್ರಹ ಹೆಚ್ಚಾಗಿರಬಹುದು. ಇದನ್ನು ಸರಿಪಡಿಸದೇ ಹೋದರೆ ಮುಂದೆ ಕಿವಿ ಸೋರುವಿಕೆ, ಅಲರ್ಜಿ, ಕಿವಿ ರಂದ್ರದಲ್ಲಿ ಹಾನಿಯಾಗಬಹುದು.
ಕಿವಿಯ ಯಾವುದೇ ಸಮಸ್ಯೆಯನ್ನು ನಿರ್ಲ್ಯಕ್ಷ ಮಾಡದೇ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ನೀವಾಗಿಯೇ ಮನೆ ಮದ್ದು ಮಾಡಲು ಹೋಗಬೇಡಿ. ಯಾಕೆಂದರೆ ಕಿವಿ ತುಂಬಾ ಸೂಕ್ಷ್ಮ ಅಂಗಗಳಲ್ಲಿ ಒಂದು. ಎಲ್ಲಕ್ಕಿಂತ ಹೆಚ್ಚಾಗಿ ಕಿವಿಯ ಸ್ವಚ್ಛತೆಗೆ ಹೆಚ್ಚು ಗಮನ ಕೊಡಿ. ಸ್ನಾನದ ತಕ್ಷಣ ಕಿವಿಯನ್ನು ಚೆನ್ನಾಗಿ ಒರೆಸಿಕೊಳ್ಳುವುದು, ಆಗಾಗ ಕಿವಿಯ ಮೇಣ ಕ್ಲೀನ್ ಮಾಡುವುದು ಇತ್ಯಾದಿ ಮಾಡಿ ಶುಚಿತ್ವ ಕಾಪಾಡಿಕೊಳ್ಳಿ. ಕಿವಿ ತುರಿಸುವಿಕೆ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಕಾರಣ ತಿಳಿದುಕೊಂಡು ಚಿಕಿತ್ಸೆ ಪಡೆಯಿರಿ.
ಕಾಡು ಮಾವಿನ ಹಣ್ಣಿನಿಂದ ಈ ಸಿಂಪಲ್ ರೆಸಿಪಿ ಮಾಡಿ