Publish Date: Fri, 15 Sep 2017 (11:25 IST)
Updated Date: Fri, 15 Sep 2017 (11:28 IST)
ಬೆಂಗಳೂರು: ತೂಕವೂ ಇಳಿಸಬೇಕು, ಬೆಳಗಿನ ಉಪಾಹಾರವೂ ಲೈಟಾಗಿರಬೇಕು ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ಉಪಾಯ. ತೂಕ ಇಳಿಸಬೇಕು ಎನ್ನುವವರು ಬೆಳಗಿನ ತಿಂಡಿಗೆ ಇದನ್ನು ಸೇವಿಸಬಹುದು.
ಹಬೆ ಇಡ್ಲಿ
ಇಡ್ಲಿ ಸಾಧಾರಣ ಎಲ್ಲರ ಮನೆಯಲ್ಲೂ ಬೆಳಗಿನ ಉಪಾಹಾರಕ್ಕೆ ಮಾಡುವ ತಿಂಡಿ. ಮೃದುವಾದ ಇಡ್ಲಿ ತಿನ್ನುವುದರಿಂದ ತೂಕ ಹೆಚ್ಚಾಗಲ್ಲ.
ಅವಲಕ್ಕಿ
ಅವಲಕ್ಕಿ ಉಪ್ಪಿಟ್ಟು, ಥಟ್ ಅಂತ ಮಾಡಲು ಸಾಧ್ಯವಾಗುವ ತಿಂಡಿ. ಇದು ತೂಕ ಇಳಿಸಲು ತುಂಬಾ ಸಹಾಯಕಾರಿ. ಇದಕ್ಕೆ ಸಾಕಷ್ಟು ಈರುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಕೊಟ್ಟರೆ.. ವಾವ್…! ಸ್ವಾದಿಷ್ಟವಾಗಿರುತ್ತದೆ.
ಹೆಸರು ಕಾಳು
ಮೊಳಕೆ ಬರಿಸಿದ ಕಾಳು, ಜತೆಗೆ ತರಕಾರಿಗಳನ್ನು ಕೋಸಂಬರಿ ರೀತಿ ಮಾಡಿಕೊಂಡು, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ, ಒಂಚೂಡು ನಿಂಬೆ ರಸ ಹಾಕಿಕೊಂಡು ಸೇವಿಸಿ. ನಾಲಿಗೆಗೂ ರುಚಿ. ದೇಹ ತೂಕ ಕಳೆದುಕೊಳ್ಳಲೂ ಸಹಕಾರಿ.