Select Your Language

Notifications

webdunia
webdunia
webdunia
webdunia

ಒಣ ಹಣ್ಣುಗಳನ್ನು ಸೇವಿಸಲು ಬೆಸ್ಟ್ ಟೈಮ್ ಯಾವುದು?

ಒಣ ಹಣ್ಣುಗಳನ್ನು ಸೇವಿಸಲು ಬೆಸ್ಟ್ ಟೈಮ್ ಯಾವುದು?
ಬೆಂಗಳೂರು , ಗುರುವಾರ, 14 ಸೆಪ್ಟಂಬರ್ 2017 (08:24 IST)
ಬೆಂಗಳೂರು: ಡ್ರೈ ಫ್ರೂಟ್ಸ್ ನಮ್ಮ ದೇಹಕ್ಕೆ ಹಲವು ರೀತಿಯಿಂದ ಒಳ್ಳೆಯದನ್ನು ಮಾಡುತ್ತದೆ. ಸಾಕಷ್ಟು ಪೌಷ್ಠಿಕಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ಯಾವಾಗ ಸೇವಿಸಿದರೆ ಉತ್ತಮ ನೋಡೋಣ.

 
ಬೆಳಿಗ್ಗೆ: ಬಾದಾಮಿ ತಿನ್ನಲು ಬೆಳಗಿನ ಸಮಯವೇ ಉತ್ತಮ.  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಬೀಜ ತಿನ್ನುವುದು ಉತ್ತಮ.

ಸಂಜೆ: ಪಿಸ್ತಾ, ಗೇರು ಬೀಜ, ಪೀನಟ್ ಗಳಂತಹ ಒಣ ಹಣ್ಣುಗಳನ್ನು ಸಂಜೆ ಸಮಯದಲ್ಲಿ ತಿನ್ನುವುದು ಸೂಕ್ತ. ದಿನವಿಡೀ ಕೆಲಸ ಮಾಡಿ ಸುಸ್ತಾದಾಗ ಸಂಜೆ ಶಕ್ತಿ ತುಂಬಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಸಮಯದಲ್ಲಿ ಈ ಹಣ್ಣುಗಳನ್ನು ಸೇವಿಸಬಹುದು.

ರಾತ್ರಿ: ವಾಲ್ ನಟ್, ಖರ್ಜೂರ ಮುಂತಾದವುಗಳನ್ನು ರಾತ್ರಿ ವೇಳೆ ತಿನ್ನುವುದು ಸೂಕ್ತ. ಇವುಗಳಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆ ದೂರ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ಲಿ ನೀರು ಸೇವಿಸಿದರೆ ಏನು ಲಾಭ ತಿಳಿಯಿರಿ