Publish Date: Fri, 08 Sep 2017 (08:11 IST)
Updated Date: Fri, 08 Sep 2017 (08:13 IST)
ಬೆಂಗಳೂರು: ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅರಸಿನವೂ ಹೆಚ್ಚು ಸೇವಿಸಿದರೆ ತೊಂದರೆ ಉಂಟುಮಾಡಬಹುದು. ಹೇಗೆ? ಇದನ್ನು ಓದಿ.
ಹೊಟ್ಟೆ ಹಾಳು
ಒಂದು ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಅರಸಿನ ಪುಡಿ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಹೊಟ್ಟೆ ಹಾಳು ಮಾಡುತ್ತದೆ. ಹೆಚ್ಚು ಅರಸಿನ ಪುಡಿ ಸೇವಿಸುವುದರಿಂದ ಕೆಳಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.
ಮೂತ್ರಪಿಂಡ ಕಲ್ಲು
ಅರಸಿನದಲ್ಲಿರುವ ಆಕ್ಸಾಲೇಟ್ ಗಳು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು. ಈ ಆಕ್ಸಲೇಟ್ ಗಳು ಕ್ಯಾಲ್ಶಿಯಂ ಕಲ್ಲುಗಳಾಗಿ ಪರಿವರ್ತಿತವಾಗಬಹುದು.
ಬೇಧಿ, ತಲೆಸುತ್ತು
ಅರಸಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದರಿಂದ ಜೀರ್ಣಸಂಬಂಧಿ ಸಮಸ್ಯೆಗಳುಂಟಾಗಬಹುದು. ಇದರಿಂದ ತಲೆಸುತ್ತು, ಬೇಧಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅಲರ್ಜಿ ಸಮಸ್ಯೆ
ಅರಸಿನದಲ್ಲಿರುವ ಕೆಲವು ಅಂಶಗಳಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಕಜ್ಜಿ, ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ