Webdunia - Bharat's app for daily news and videos

Install App

ಎಚ್ಚರ! ಈ ನಿದ್ರಾ ಸಮಸ್ಯೆಗಳು ಜೀವಕ್ಕೆ ಅಪಾಯವನ್ನು ತರಬಹುದು

Webdunia
ಬುಧವಾರ, 1 ಮೇ 2019 (06:40 IST)
ಬೆಂಗಳೂರು : ನಿದ್ರೆ ಚೆನ್ನಾಗಿ ಮಾಡುವವರು ಆರೋಗ್ಯವಾಗಿರುತ್ತಾರೆ ಎಂದು ಹೇಳುತ್ತಾರೆ. ಆದರೆ ನಿದ್ರೆಗೆ ಸಂಬಂಧಪಟ್ಟ ಕೆಲವು ಸಮಸ್ಯೆಗಳು ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಆದ್ದರಿಂದ ಇವುಗಳ ಬಗ್ಗೆ ಆರಂಭದಲ್ಲಿಯೇ ಎಚ್ಚರವಹಿಸಿ.



*ಕೆಲವರಿಗೆ ನಿದ್ರೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. ಇದು ವಯಸ್ಕರಿಗಿಂತಲೂ ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿದ್ರೆಯ ಕೊರತೆ ಅಥವಾ ಒತ್ತಡದ ಪರಿಣಾಮದಿಂದ ಇದು ಉಂಟಾಗುತ್ತದೆ. ವ್ಯಕ್ತಿಗೆ ತಾನು ನಡೆಯುತ್ತಿರುವುದರ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಈ ಸಮಸ್ಯೆ ಅಪಾಯವನ್ನುಂಟುಮಾಡಬಹುದು.

 

*ಕೆಲವರು ನಿದ್ರೆಯಲ್ಲಿ ಹಲ್ಲು ಕಡಿಯುತ್ತಾರೆ. ಜಗತ್ತಿನ ಶೇ.30ರಷ್ಟು ಜನರು ಈ ತೊಂದರೆಯಿಂದ ಬಳಲುತ್ತಾರೆ. ಇದರಿಂದ ಹಲ್ಲುಗಳು ಸವೆಯುವುದು ಹೆಚ್ಚಾಗಿ ಅಸ್ಥಿರಜ್ಜುಗಳಲ್ಲಿ ಉರಿಯೂತ ಉಂಟಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಇದರಿಂದ ತಲೆನೋವು ಕೂಡ ಕಾಣಿಸಿಕೊಳ್ಳಬಹುದು.

 

*ಹಾಸಿಗೆಯಲ್ಲಿ ಚಿಕ್ಕ ಮಕ್ಕಳು ಮೂತ್ರ ಮಾಡಿಕೊಳ್ಳುವುದು ಸಾಮಾನ್ಯವಾದ ವಿಚಾರ. ಆದರೆ ಕೆಲವೊಮ್ಮೆ ವಯಸ್ಕರಲ್ಲಿಯೂ ಈ ಸಮಸ್ಯೆ ಕಂಡಬರುತ್ತದೆ. ರಾತ್ರಿಯ ವೇಳೆ ಆ್ಯಂಟಿ-ಡೈಯುರೇಟಿಕ್‌ ಹಾರ್ಮೋನ್‌ ಉತ್ಪಾದನೆಯಾಗುತ್ತದೆಯಲ್ಲದೆ ಇದು ಕೆಲವೊಮ್ಮೆ ಸೂಕ್ತ ಪ್ರಮಾಣದಲ್ಲಿ ಉತ್ಪಾದನೆಯಾಗದಿರಬಹುದು. ಕೆಲವೊಮ್ಮೆ ಮೂತ್ರಪಿಂಡಗಳು ಅದಕ್ಕೆ ಪ್ರತಿಕ್ರಿಯಿಸಲು ವಿಫಲವಾಗಬಹುದು. ಇದರಿಂದ ವ್ಯಕ್ತಿ ಹಾಸಿಗೆಯಲ್ಲೇ ಮೂತ್ರ ವಿಸರ್ಜಿಸುವ ಪ್ರಕರಣಗಳು ಕಂಡುಬರುತ್ತವೆ.

 

* ಹೆಚ್ಚಾಗಿ ಪುರುಷರು ನಿದ್ರೆಯ ವೇಳೆ ಗೊರಕೆ ಹೊಡೆಯುತ್ತಾರೆ. ವಯಸ್ಸಾದಂತೆ ಈ ತೊಂದರೆ ಮತ್ತಷ್ಟು ಹದಗೆಡಬಹುದು.  ಅಲರ್ಜಿ ಅಥವಾ ಗಂಟಲಿನ ಸೋಂಕಿನ ನಂತರ ಗೊರಕೆಯ ತೊಂದರೆ ಕಾಣಿಸಿಕೊಳ್ಳಬಹುದು. ನಿದ್ರೆಗೆ ಇದು ಅಡ್ಡಿಯಾಗಬಹುದಲ್ಲದೆ ಶ್ವಾಸಕೋಶಗಳಿಗೆ ಗಾಳಿಯ ಹರಿವನ್ನು ಇದು ಸಂಪೂರ್ಣವಾಗಿ ತಡೆಯುವುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ
Show comments