ಬೆಂಗಳೂರು : ಉತ್ತಮವಾದ ದೃಷ್ಟಿ, ಕೂದಲು, ಚರ್ಮವನ್ನು ಹೊಂದಲು ನಮ್ಮ ದೇಹಕ್ಕೆ ವಿಟಮಿನ್ ಎ ಅಧಿಕವಾಗಿ ಬೇಕು. ಇದು ದೇಹದ ವಿವಿಧ ಬೆಳವಣೆಗೆಗೆ ಸಹಕಾರಿಯಾಗಿದೆ. ಆದಕಾರಣ ಪ್ರತಿದಿನ ತಪ್ಪದೇ ವಿಟಮಿನ್ ಎ ಅಂಶವಿರುವ ಆಹಾರಗಳನ್ನು ಸೇವಿಸಿ.
ವಿಟಮಿನ್ ಎ ಅಂಶವಿರುವ ಆಹಾರಗಳೆಂದರೆ ಸಸ್ಯ ಆಧಾರಿತ ವಸ್ತುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿರುತ್ತದೆ. ಕಿತ್ತಳೆ, ಕೆಂಪು ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ಉತ್ತಮ ಪ್ರಮಾಣದ ವಿಟಮಿನ್ ಎಯನ್ನು ಒಳಗೊಂಡಿರುತ್ತದೆ. ಹಸಿರು ಸೊಪ್ಪು, ತರಕಾರಿಗಳು, ಕ್ಯಾರೆಟ್, ಟೊಮೆಟೊ, ಸಿಹಿ ಆಲೂಗಡ್ಡೆ , ಮಾವಿನ ಹಣ‍್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ.