Select Your Language

Notifications

webdunia
webdunia
webdunia
webdunia

ಕೈಗಳ ಕಪ್ಪು ಬಣ‍್ಣವನ್ನು ತೆಗೆದುಹಾಕಲು ಈ ತರಕಾರಿಗಳನ್ನು ಬಳಸಿ

ಕೈಗಳ ಕಪ್ಪು ಬಣ‍್ಣವನ್ನು ತೆಗೆದುಹಾಕಲು ಈ ತರಕಾರಿಗಳನ್ನು ಬಳಸಿ
ಬೆಂಗಳೂರು , ಗುರುವಾರ, 25 ಮಾರ್ಚ್ 2021 (06:32 IST)
ಬೆಂಗಳೂರು : ಬೇಸಿಗೆಯ ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿದರೆ ಸೂರ್ಯನ ಯುವಿ ಕಿರಣಗಳಿಂದ ಹಾನಿಗೊಳಗಾಗಿ ಮುಖ ಮಾತ್ರವಲ್ಲ ಕೈಗಳ ಚರ್ಮ  ಕೂಡ ಕಪ್ಪಾಗುತ್ತವೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕೈಗಳ ಕಪ್ಪು ಬಣ‍್ಣವನ್ನು ತೆಗೆದುಹಾಕಲು ಇದನ್ನು ಹಚ್ಚಿ.

ಟೊಮೆಟೊ  ಆ್ಯಂಟಿ ಆಕ್ಷಿಡೆಂಟ್ ಅನ್ನು ಒಳಗೊಂಡಿದೆ. ಇದು ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ. ಹಾಗಾಗಿ ಚರ್ಮದ ಟ್ಯಾನಿಂಗ್ ನ್ನು ಕಡಿಮೆಮಾಡಲು ಟೊಮೆಟೊ ತಿರುಳು ಮತ್ತು ಕಡಲೆ ಹಿಟ್ಟನ್ನು ಬೆರೆಸಿ ಕೈಗಳ ಮೇಲೆ ಹಚ್ಚಿ ಸ್ಕ್ರಬ್ ಮಾಡಿ.  ಇದನ್ನು ವಾರಕ್ಕೊಮ್ಮೆ ಮಾಡಿ.

ಹಾಗೇ ಕೈಗಳ ಟ್ಯಾನಿಂಗ್ ಅನ್ನು ನಿವಾರಿಸಲು ಸೌತೆಕಾಯಿ ಬಳಸಿ. ಇದರಲ್ಲಿರುವ ಪೋಷಕಾಂಶಗಳು ಕೈಗಳ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಸೌತೆಕಾಯಿ ಕತ್ತರಿಸಿ ಅದನ್ನು ಕೈಗಳಿಗೆ ಉಜ್ಜಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಕು ಪ್ರಾಣಿಗಳು ಕುಳಿತುಕೊಂಡ ಸ್ಥಳದಲ್ಲಿ ವಾಸನೆ ಬರುತ್ತಿದ್ದರೆ ಇದರಿಂದ ಸ್ವಚ್ಛ ಮಾಡಿ