Publish Date: Wed, 24 Mar 2021 (13:16 IST)
Updated Date: Wed, 24 Mar 2021 (13:19 IST)
ಬೆಂಗಳೂರು : ಯಾರಿಗೆ ಅನೈತಿಕ ಸಂಬಂಧವಿದೆ, ವಿವಾಹೇತರ ಸಂಬಂಧವಿದೆ. ತನಿಖೆಯ ಮುಖಾಂತರ ಎಲ್ಲ ವಿಚಾರ ಬಯಲಿಗೆ ಬರಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಅವರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ವಿ.ಮುನಿಯಪ್ಪ ಇವರೆಲ್ಲಾ ಸತ್ಯಹರಿಶ್ಚಂದ್ರರಲ್ಲಪ್ಪಾ. ಇವರೆಲ್ಲರೂ ಏಕಪತ್ನಿವ್ರತಸ್ಥರು, ಮಾದರಿಯಾಗಿದ್ದಾರಲ್ಲಾ? ಹೀಗಾಗಿ ಇವರು ಸೇರಿ 225 ಶಾಸಕರ ವಿರುದ್ಧ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಇದು ನೈತಿಕತೆ ಪ್ರಶ್ನೆಯಲ್ವಾ ಹೀಗಾಗಿ ತನಿಖೆಯಾಗಲಿ. ಆಗ ಯಾರು ಮರ್ಯಾದಾ ಪುರುಷರು, ಮುಖ್ಯಮಂತ್ರಿ ಆಗಿದ್ದಾಗ ಯಾರ್ಯಾರು ಏನೇನು ಮಾಡಿದ್ದರು ಎಂಬುದು ಹೊರಬೀಳುತ್ತದೆ ಎಂದು ಅವರು ತಿಳಿಸಿದ್ದಾರೆ.