ಬೆಂಗಳೂರು : ಕೆಲವರು ಮನೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಸಾಕುತ್ತಾರೆ. ಆದರೆ ಕೆಲವೊಮ್ಮೆ ಪ್ರಾಣಿಗಳ ದೇಹದಿಂದ ವಾಸನೆ ಬರುತ್ತಿರುತ್ತದೆ. ಹಾಗಾಗಿ ಅವು ಮನೆಯಲ್ಲಿ ಕುಳಿತುಕೊಂಡ, ಮಲಗಿಕೊಂಡ ಸ್ಥಳದಲ್ಲಿ ವಾಸನೆ ಬರುತ್ತಿರುತ್ತದೆ. ಈ ವಾಸನೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
ಸಾಕು ಪ್ರಾಣಿಗಳು ವಾಸಿಸುವ ಸ್ಥಳವನ್ನು ಸ್ವಚ್ಛಗೊಳಿಸಲು ಒಂದು ಪಾತ್ರೆಯಲ್ಲಿ ನಿಂಬೆ ರಸ, ಸಕ್ಕರೆ ಮತ್ತು ಕಿತ್ತಳೆಸಿಪ್ಪೆಯ ಪೇಸ್ಟ್ ಅನ್ನು ಮಿಕ್ಸ್ ಮಾಡಿ ಅದರಿಂದ ಪ್ರಾಣಿಗಳು ಕುಳಿತುಕೊಂಡ, ಮಲಗಿಕೊಂಡ ಸ್ಥಳಗಳನ್ನು ಸ್ವಚ್ಛಗೊಳಿಸಿ.
ಹಾಗೇ ಪ್ರಾಣಿಗಳ ದೇಹದಿಂದ ವಾಸನೆ ಬರಬಾರದಂತಿದ್ದರೆ ಅದನ್ನು ನಿವಾರಿಸಲು ನೀರಿಗೆ ಲ್ಯಾವೆಂಡರ್ ಆಯಿಲ್ ಮಿಕ್ಸ್ ಮಾಡಿ ಸಾಕುಪ್ರಾಣಿಗಳನ್ನು ಸ್ನಾನ ಮಾಡಿಸಿ.