Publish Date: Thu, 21 Nov 2019 (06:17 IST)
Updated Date: Thu, 21 Nov 2019 (06:18 IST)
ಬೆಂಗಳೂರು : ತರಕಾರಿಗಳು ಅಥವಾ ಇನ್ನಿತರ ವಸ್ತುಗಳನ್ನು ಕತ್ತರಿಸಲು ಕಬ್ಬಿಣದ ಚಾಕುಗಳನ್ನು ಬಳಸುತ್ತೇವೆ. ಇದರಿಂದ ವಸ್ತುಗಳನ್ನು ಕತ್ತರಿಸಿದ ನಂತರ ಅದನ್ನು ತೊಳೆದು ಇಟ್ಟ ನಂತರವೂ ಅದರ ಮೇಲೆ ಕಪ್ಪು ಕಲೆಗಳು, ತುಕ್ಕು ಹಿಡಿದಿರುವುದು ಕಂಡುಬರುತ್ತದೆ.ಇದನ್ನು ಹಾಗೇ ಸ್ವಚ್ಚ ಮಾಡಿದರೆ ಹೋಗುವುದಿಲ್ಲ. ಇದನ್ನು ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
ಕಬ್ಬಿಣದ ಚಾಕುವಿನ ಮೇಲಿರುವ ಕಪ್ಪು ಕಲೆಗಳು, ತುಕ್ಕು ಹಿಡಿದಿರುವುದನ್ನು ತೆಗೆದು ಚಾಕುವನ್ನು ಕ್ಲೀನ್ ಆಗಿಸಲು ನಿಂಬೆ ಹಣ್ಣಿನ ಅರ್ಧ ಪೀಸ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸವರಿ ಚಾಕುವಿನ ಮೇಲೆ ಚೆನ್ನಾಗಿ ಉಜ್ಜಿ ತೊಳೆಯಿರಿ. ಹೀಗೆ ಮಾಡುವುದರಿಂದ ಚಾಕು ತುಂಬಾ ಕ್ಲೀನ್ ಆಗುತ್ತದೆ.