Select Your Language

Notifications

webdunia
webdunia
webdunia
webdunia

ತನ್ವೀರ್ ಸೇಠ್ ಗೆ ಚಾಕು ಇರಿತ ಕೇಸ್ : ಯು.ಟಿ. ಖಾದರ್ ಸಿಡಿಸಿದ್ರು ಹೊಸ ಬಾಂಬ್

ತನ್ವೀರ್ ಸೇಠ್ ಗೆ ಚಾಕು ಇರಿತ ಕೇಸ್ : ಯು.ಟಿ. ಖಾದರ್ ಸಿಡಿಸಿದ್ರು ಹೊಸ ಬಾಂಬ್
ಮಂಗಳೂರು , ಬುಧವಾರ, 20 ನವೆಂಬರ್ 2019 (20:03 IST)
ಮುಂಬರುವ ರಾಜ್ಯ ಉಪ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ.

ಕಾಂಗ್ರೆಸ್ ಬಹುಮತ ಗಳಿಸುತ್ತದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಅನರ್ಹ ಅಂತ ತೀರ್ಪು ಕೊಟ್ಟು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ.
ಅಂಥವರು ಜನರಿಗೆ ಬೇಕಾ? ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ. ಹಣ ಪಡೆದ ಅನರ್ಹರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ.  ನಾವೆಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮ ಪಡುತ್ತೇವೆ ಎಂದರು.

ಶಾಸಕ ತನ್ವೀರ್ ಸೇಠ್‌ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ. ಜನಪ್ರತಿನಿಧಿಗೆ ಹಲ್ಲೆ ಮಾಡುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕೃತ್ಯದ ಸಂಪೂರ್ಣ ತನಿಖೆ ಮಾಡಲೇಬೇಕು ಎಂದ ಯುಟಿ ಖಾದರ್ ಒತ್ತಾಯಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಕಮಲ್ ಹಾಸನ್ ಗೆ ಗೌರವ ಡಾಕ್ಟರೇಟ್