ಚಳಿಗಾಲದ ತ್ವಚೆಗೆ ರೋಸ್ ವಾಟರ್ ಬಳಸಿ

Webdunia
ಗುರುವಾರ, 13 ಜನವರಿ 2022 (12:13 IST)
ಹೊರಗಿನ ಧೂಳು ಹೀಗೆ ಹಲವು ಕಾರಣಗಳಿಂದ ಸಮಸ್ಯೆಗಳು ಉಲ್ಬಣಿಸುತ್ತಲೇ ಇರುತ್ತವೆ.

ಅದರಲ್ಲೂ ಚಳಿಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳು ಒಂದೆರಡಲ್ಲ. ಚಳಿಗೆ ಒಡೆಯುವ ತ್ವಚೆ, ಒಣಗಿದ ಅನುಭವ, ಕಳೆಕುಂದುವುದು ಹೀಗೆ ಚಳಿಗಾಲದಲ್ಲಿ ಚರ್ಮದ ಸಮಸ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅದಕ್ಕಾಗಿ ಪಾರ್ಲರ್ಗಳ ಮೊರೆ ಹೋಗುವುದಕ್ಕಿಂತ ಮನೆಯಲ್ಲಿಯೇ ಸರಳ ವಿಧಾನಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅದಕ್ಕೆ ಸರಳ ವಿಧಾನ ಎಂದರೆ ರೋಸ್ ವಾಟರ್ ಬಳಕೆ.

ರೋಸ್ ವಾಟರ್ ನಿಮ್ಮ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಚರ್ಮದ ಮೇಲಿನ ಧೂಳನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಒಣ ತ್ವಚೆ, ಎಣ್ಣೆಯುತ ತ್ವಚೆಗೂ ರೋಸ್ ವಾಟರ್ಅನ್ನು ಬಳಕೆ ಮಾಡಬಹುದು.

ಮೊಡವೆ

ರೋಸ್ ವಾಟರ್ ಮುಖದ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಿ, ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಹೀಗಾಗಿ ಮೊಡವೆ ನಿವಾರಣೆಗೆ ರೋಸ್ ವಾಟರ್ ಉತ್ತಮ ರೆಮಿಡಿಯಾಗಿದೆ.

ಒಣ ಚರ್ಮ

ನೀವು ಒಣ ಚರ್ಮದವರಾಗಿದ್ದರೆ ರೋಸ್ ವಾಟರ್ ನಿಮ್ಮ ಚರ್ಮದ ಸಮಸ್ಯೆಗೆ ಪರಿಹಾರ ನೀಡುತ್ತದೆ.  ರೋಸ್ ವಾಟರ್ನಲ್ಲಿ  ಮಾಶ್ಚರೈಸ್ ಅನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಇದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ. ಗ್ಲಿಸರಿನ್ ಜತೆಗೆ ರೋಸ್ ವಾಟರ್ ಮಿಕ್ಸ್ ಮಾಡಿ ಹಚ್ಚಿಕೊಂಡರೆ ನಿಮ್ಮ ಒಣ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

ಮೇಕಪ್

ಮೇಕಪ್ ಮುಖದ ಅಂದವನ್ನು ಹೇಗೆ ಹೆಚ್ಚಿಸುತ್ತದೆಯೋ ಚರ್ಮಕ್ಕೂ ಅಷ್ಟೇ ಹಾನಿಯನ್ನು ಉಂಟು ಮಾಡುತ್ತದೆ. ಆದರಿಂದ ತ್ವಚೆಯ ರಕ್ಷಣೆಗೆ ಮೇಕಪ್ ತೆಗೆಯಲು ರೋಸ್ ವಾಡರ್ ಬಳಸಿಕೊಳ್ಳಿ.

ತುಟಿಗಳ ರಕ್ಷಣೆ

ಚಳಿಗಾಲದಲ್ಲಿ ವಾತಾವರಣದ ಶುಷ್ಕತೆಯಿಂದ ತುಟಿಗಳು ಒಡೆದು ರಕ್ತ ಬರುವಂತೆ ಆಗುತ್ತದೆ. ಇದನ್ನು ತಡೆಯಲು ರೋಸ್ ವಾಟರ್ ಅನ್ನು ಬಳಸಿಕೊಳ್ಳಿ. ರೋಸ್ ವಾಟರ್ನಲ್ಲಿರುವ ಫೆನೋಲಿಕ್ ಅಂಶಗಳು ನಿಮ್ಮ ಒಡೆದಿರುವ ತುಟಿಗಳನ್ನು ಸರಿಮಾಡುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments