Publish Date: Fri, 20 Apr 2018 (07:22 IST)
Updated Date: Fri, 20 Apr 2018 (07:23 IST)
ಬೆಂಗಳೂರು: ಸೆಕ್ಸ್ ಎನ್ನುವುದು ಉಲ್ಲಾಸ ಕೊಡುವ ಪ್ರಕ್ರಿಯೆ. ಆದರೆ ಕೆಲವೊಂದು ಗುಪ್ತಾಂಗ ರೋಗಗಳಿಂದ ಇದು ಮಾರಕವಾಗಬಹುದು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಆಗುವ ಈ ಎರಡು ಸಮಸ್ಯೆಗಳು ಯಾವುವು ನೋಡೋಣ.
ಕಜ್ಜಿ
ವಿಪರೀತ ತುರಿಕೆಯಿಂದಾಗಿ ಗುಪ್ತಾಂಗದಲ್ಲಿ ಕೆಂಪು ಬಣ್ಣದ ಕಜ್ಜಿ ಉಂಟಾಗಬಹುದು. ಗುಪ್ತಾಂಗದ ಕೂದಲುಗಳಲ್ಲಿ ಕಣ್ಣಿಗೆ ಕಾಣಿಸುವಂತಹ ಸಣ್ಣ ಆಕಾರದ ಹೇನು ಕೂಡಾ ಕಾಣಿಸಿಕೊಳ್ಳಬಹುದು.
ಮೂತ್ರ ಸಮಸ್ಯೆ
ಮಹಿಳೆಯರಿಗೆ ಹೆಚ್ಚಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಗುಪ್ತಾಂಗ ರೋಗ ಹರಡುವಿಕೆಯಿಂದ ಮೂತ್ರ ಸಮಸ್ಯೆ ಕಾಣಿಸಿಕೊಳ್ಳಬಹುದು. ಮೂತ್ರಿಸುವಾಗ ನೋವು, ಕೆಳ ಹೊಟ್ಟೆ ನೋವು, ಬೆನ್ನು ನೋವಿನಂತಹ ಸಮಸ್ಯೆ ಬರಬಹುದು. ಇದಕ್ಕೆ ವೈದ್ಯರನ್ನು ಸಂಪರ್ಕಿಸುವುದೇ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.