ಬೆಂಗಳೂರು : ಹೆಚ್ಚಿನ ಮಹಿಳೆಯರು ಯಾವಾಗಲೂ ಬ್ಯೂಸಿಯಾಗಿರುವ ಕಾರಣ ಅವರ ಆರೋಗ್ಯದ ಕಡೆ ಗಮನಹರಿಸುವುದಿಲ್ಲ.ಈ ಒತ್ತಡ ಸಮಸ್ಯೆಯು ಮಹಿಳೆಯರಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಇದರಿಂದ ಸೆಕ್ಸ್ ಸಂಬಂಧಿ ಸಮಸ್ಯೆಗಳು ಕಂಡುಬರುತ್ತದೆ. ಇದನ್ನು ನೆಗ್ಲೇಟ್ ಮಾಡಿದರೆ ಈ ಸಮಸ್ಯೆಗಳು ಅವರ ಸೆಕ್ಸ್ ಲೈಫ್ ಗೆ ಮಾರಕವಾಗಿದೆ.
*ಯೋನಿಯಲ್ಲಿ ತುರಿಕೆ : ಯೋನಿಯಲ್ಲಿ ತುರಿಕೆಯಾಗುವುದು ಬಹಳ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಯೋನಿಯನ್ನು ಯಾವಾಗಲು ಶುಚಿಯಾಗಿಡುವುದು ಅಗತ್ಯ. ತುರಿಕೆಯಾಗುತ್ತಿದೆ ಎಂದು ತುರಿಸಿ ಸುಮ್ಮನಿರುವುದರಿಂದ ಪದೇ ಪದೇ ತುರಿಕೆ ಕಾಣಿಸಿಕೊಳ್ಳುತ್ತದೆ. ಅದರ ಬದಲು ಆ ತುರಿಕೆಗೆ ಕಾರಣವೇನೆಂಬುದನ್ನು ಕಂಡು ಹಿಡಿದು ಅದನ್ನ ಶಮನಗೊಳಿಸಲು ಪ್ರಯತ್ನಿಸಿ.
*ಲ್ಯೂಕೋರಿಯಾ ಸ್ರಾವವಾಗುವುದು : ಗುಪ್ತಾಂಗದಲ್ಲಿ ಹೊರಬರುವ ಬಿಳಿ ಬಣ್ಣದ ಜೆಲ್‌ನ್ನು ಲ್ಯುಕೋರಿಯಾ ಎನ್ನುತ್ತೇವೆ. ಇತ್ತೀಚೆಗೆ ಲ್ಯೂಕೇರಿಯಾ ಸ್ರಾವವಾಗುವುದು ಕಾಮನ್ ಆಗಿಬಿಟ್ಟಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸ್ರಾವವಾಗುತ್ತಿದ್ದರೆ ವೈದ್ಯರನ್ನು ಕಾಣುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ