Select Your Language

Notifications

webdunia
webdunia
webdunia
webdunia

ಮನೆಯ ಮೇಲೆ ನೀರಿನ ಟ್ಯಾಂಕನ್ನು ಈ ದಿಕ್ಕಿನಲ್ಲಿ ಕಟ್ಟಿದರೆ ಉತ್ತಮ

ಮನೆಯ ಮೇಲೆ ನೀರಿನ ಟ್ಯಾಂಕನ್ನು ಈ ದಿಕ್ಕಿನಲ್ಲಿ ಕಟ್ಟಿದರೆ ಉತ್ತಮ
ಬೆಂಗಳೂರು , ಬುಧವಾರ, 18 ಏಪ್ರಿಲ್ 2018 (08:41 IST)
ಬೆಂಗಳೂರು : ಮನೆಯನ್ನು ನಿರ್ಮಿಸಿದ ನಂತರ ಹೆಚ್ಚಿನವರು ಮನೆಯ ಮೇಲ್ಭಾಗದಲ್ಲಿ ನೀರಿನ ಟ್ಯಾಂಕನ್ನು ಕಟ್ಟುತ್ತಾರೆ. ಆದರೆ ಅದನ್ನು ಯಾವ ದಿಕ್ಕಿನಲ್ಲಿ ಕಟ್ಟಿದರೆ ಉತ್ತಮ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಈ ನೀರಿನ ಟ್ಯಾಂಕ್ ಯಾವ ದಿಕ್ಕಿನಲ್ಲಿರಬೇಕು ಎಂಬುದು ಇಲ್ಲಿದೆ ನೋಡಿ.


ನೀರನ್ನು ಶೇಖರಿಸುವ ಟ್ಯಾಂಕನ್ನು ಮಹಡಿಯ ಮೇಲೆ ನೈರುತ್ಯ, ವಾಯುವ್ಯ, ಆಗ್ನೇಯದ ಮೂಲೆಗಳಲ್ಲಿ ಕಟ್ಟಬಹುದು. ಟ್ಯಾಂಕನ್ನು ಕಟ್ಟಬೇಕೆಂದುಕೊಂಡರೆ ಅದರ ಎತ್ತರಕ್ಕೆ ಕಡಿಮೆ ಇಲ್ಲದಂತೆ ನೈರುತ್ಯದಲ್ಲಿ ಎತ್ತರದಲ್ಲಿ ಒಂದು ಕೋಣೆಯನ್ನು ಕಟ್ಟಬೇಕು. ನೈರುತ್ಯದಲ್ಲಿ ಟ್ಯಾಂಕು ಕಟ್ಟಿದಾಗ ಇತರ ಯಾವ ಮೂಲೆಯಲ್ಲೂ ಏನು ಕಟ್ಟಿದರೂ ದೋಷವಿಲ್ಲ. ನೈರುತ್ಯ, ಆಗ್ನೇಯ, ವಾಯುವ್ಯಗಳಲ್ಲಿ ಟ್ಯಾಂಕ್‌ ಇರಬಹುದೇ ಎಂದು ಸಂದೇಹವುಂಟಾಗಬಹುದು. ಆ ಮೂಲೆಗಳಲ್ಲಿ ನೆಲದ ಮೇಲೆ ಹಳ್ಳವಾಗಿದ್ದು ನೀರಿರಬಾರದು. ಆ ಮೂಲೆಗಳಲ್ಲಿ ಭೂಮಿ ಮೇಲೆ ಸಿಂಥೆಟಿಕ್‌ ಟ್ಯಾಂಕ್‌ ಇರಿಸಿಕೊಳ್ಳಬಹುದು.


ಈಶಾನ್ಯದ ಮೂಲೆ ಎಂಥ ಎತ್ತರವನ್ನಾಗಲಿ, ಅತ್ಯಲ್ಪ ತೂಕವನ್ನಾಗಲೀ ಸಹಿಸುವುದಿಲ್ಲ, ತಡೆಯುವುದೂ ಇಲ್ಲ. ಆಕಸ್ಮತ್ತಾಗಿ ಅಲ್ಲಿ ತೂಕ ಹಾಕಿದರೆ ಬದುಕೇ ಭಾರವಾಗುತ್ತದೆ. ಆದ್ದರಿಂದ ಎಂಥ ಪರಿಸ್ಥಿತಿಯಲ್ಲೂ ಈಶಾನ್ಯದಲ್ಲಿ ಹೆಡ್‌ ಟ್ಯಾಂಕ್‌ ಅನ್ನು ಕಟ್ಟಬಾರದು. ಕಟ್ಟುವುದನ್ನು ಯೋಚಿಸಲೂಬಾರದು. ಈಶಾನ್ಯದಲ್ಲಿ ಭೂಮಿಯ ಒಳಭಾಗದಲ್ಲಿ ಕಟ್ಟುವುದು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ದುರಾದೃಷ್ಟ ದೂರವಾಗಿ ಅದೃಷ್ಟ ನಿಮ್ಮದಾಗುತ್ತದೆ