Select Your Language

Notifications

webdunia
webdunia
webdunia
webdunia

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ದುರಾದೃಷ್ಟ ದೂರವಾಗಿ ಅದೃಷ್ಟ ನಿಮ್ಮದಾಗುತ್ತದೆ

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ದುರಾದೃಷ್ಟ ದೂರವಾಗಿ ಅದೃಷ್ಟ ನಿಮ್ಮದಾಗುತ್ತದೆ
ಬೆಂಗಳೂರು , ಮಂಗಳವಾರ, 17 ಏಪ್ರಿಲ್ 2018 (15:36 IST)
ಬೆಂಗಳೂರು : ಪ್ರತಿಯೊಬ್ಬರು ಯಶಸ್ಸಿನ ಹಿಂದೆ ಓಡ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಶಾಸ್ತ್ರ, ಪದ್ಧತಿಗಳು ನಿಮಗೆ ಸಹಾಯ ಮಾಡಬಲ್ಲವು. ಬೆಳಗ್ಗೆ ಎದ್ದ ತಕ್ಷಣ ಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡಲ್ಲಿ ದುರಾದೃಷ್ಟ ದೂರವಾಗಿ ಅದೃಷ್ಟ ನಿಮಗೊಲಿಯುತ್ತದೆ.


ಯಾವುದೇ ಕೆಲಸ ಕೈಗೂಡದೆ ಹೋದಲ್ಲಿ ದುರಾದೃಷ್ಟ ಬೆನ್ನು ಹತ್ತಿದೆ ಎಂದರ್ಥ. ಪ್ರತಿದಿನ ಸ್ನಾನ ಮಾಡಿದ ನಂತ್ರ ಅಗತ್ಯವಿರುವ ವ್ಯಕ್ತಿಗೆ ಅಗತ್ಯವಿರುವ ವಸ್ತುಗಳನ್ನು ದಾನ ಮಾಡುವುದ್ರಿಂದ ನಿಮ್ಮ ದುರಾದೃಷ್ಟ ಅದೃಷ್ಟವಾಗಿ ಬದಲಾಗುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನ ನೀಡಲಾಗಿದೆ. ತುಳಸಿ ಮಂಗಳಕರವೆಂದು ನಂಬಲಾಗಿದೆ. ಹಾಗಾಗಿ ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತ್ರ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು. ಸೂರ್ಯಾಸ್ತದ ವೇಳೆ ಕೂಡ ತುಳಸಿ ಮುಂದೆ ತುಪ್ಪದ ದೀಪ ಹಚ್ಚುವುದು ಒಳ್ಳೆಯದು.


ಯಾರ ಮನೆಯಲ್ಲಿ ಗಾಯತ್ರಿ ಮಂತ್ರ ಕೇಳಿಬರುತ್ತದೆಯೋ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದಿಲ್ಲ. ಪ್ರತಿದಿನ ಸ್ನಾನವಾದ ನಂತ್ರ ಗಾಯತ್ರಿ ಮಂತ್ರವನ್ನು ಪಠಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂತವರ ಮನೆಯಲ್ಲಿ ಊಟ ಮಾಡಿದರೆ ಮಹಾ ಪಾಪ ಸುತ್ತಿಕೊಳ್ಳುತ್ತದೆಯಂತೆ!