Publish Date: Tue, 08 May 2018 (07:47 IST)
Updated Date: Tue, 08 May 2018 (07:48 IST)
ಬೆಂಗಳೂರು: ಸೆಕ್ಸ್ ಲೈಫ್ ಸೊರಗಿದೆ ಎಂಬ ಬೇಸರದಲ್ಲಿದ್ದೀರಾ? ಹಾಗಿದ್ದರೆ ಅದಕ್ಕೆ ಈ ಒಂದು ಕೆಲಸ ಮಾಡಿದರೆ ಸಾಕು. ತಾನಾಗಿಯೇ ಲೈಂಗಿಕ ಜೀವನ ಸರಿದಾರಿಗೆ ಬರುತ್ತದೆ.
ಆಧುನಿಕ ಜೀವನ ಶೈಲಿಯೇ ವಿರಳ ಸೆಕ್ಸ್ ಲೈಫ್ ಗೆ ಪ್ರಮುಖ ಕಾರಣ. ಆಧುನಿಕ ಜೀವನ ಶೈಲಿಯಲ್ಲಿ ನಿದ್ರೆ ಕಡಿಮೆ, ಒತ್ತಡವೇ ಜಾಸ್ತಿ.
ಹಾಗಾಗಿ ಸೆಕ್ಸ್ ಹಾರ್ಮೋನ್ ಬೇಕಾದಂತೆ ಸ್ಪಂದಿಸುವುದಿಲ್ಲ. ಹೀಗಾಗಿ ಸರಿಯಾಗಿ ನಿದ್ರೆ ಮಾಡಿ, ಒತ್ತಡ ದೂರ ಮಾಡಿ ಎಂದು ಹೊಸ ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. ಲೈಂಗಿಕ ಹಾರ್ಮೋನ್ ಗೂ ನಿದ್ರೆಗೂ ಹತ್ತಿರದ ಸಂಬಂಧವಿದೆ. ಹೀಗಾಗಿ ತೃಪ್ತಿಕರ ಲೈಂಗಿಕ ಜೀವನ ನಿಮ್ಮದಾಗಬೇಕಾದರೆ ಸರಿಯಾಗಿ ನಿದ್ರೆ ಆಗಲೇಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.