Publish Date: Fri, 13 Sep 2019 (09:04 IST)
Updated Date: Fri, 13 Sep 2019 (09:05 IST)
ಬೆಂಗಳೂರು: ಮಹಿಳೆಯರು ತನ್ನ ಗಂಡನಿಂದ ಬಯಸುವ ಒಂದೇ ಒಂದು ವಿಚಾರವೆಂದರೆ ಪ್ರೈವೆಸಿ. ಅದರಲ್ಲೂ ತಾನು ಹೇಳುವ ಎಲ್ಲಾ ವಿಚಾರವನ್ನು ತನ್ನ ಗಂಡ ತಮ್ಮಿಬ್ಬರೊಳಗೇ ಇಟ್ಟುಕೊಳ್ಳಬೇಕೆಂದು ಹೆಚ್ಚು ಬಯಸುತ್ತಾಳೆ.
ಅದರಲ್ಲೂ ತಮ್ಮಿಬ್ಬರ ಖಾಸಗಿ ವಿಚಾರವನ್ನು ಗಂಡ ತನ್ನ ಅಮ್ಮನ ಬಳಿ ಹೇಳಿಕೊಳ್ಳುವುದನ್ನು ಅವಳು ಸಹಿಸಿಕೊಳ್ಳುವುದೇ ಇಲ್ಲವಂತೆ! ಇದರಿಂದಾಗಿಯೇ ಹೆಚ್ಚಾಗಿ ಗಂಡ-ಹೆಂಡಿರಲ್ಲಿ ಮುನಿಸು ಶುರುವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಹಾಗೇ ಎಲ್ಲಾ ವಿಚಾರದಲ್ಲೂ ಅಮ್ಮನ ಬಳಿ ಚರ್ಚಿಸುವ ಮೊದಲು ತನ್ನ ಬಳಿ ಚರ್ಚಿಸಬೇಕೆಂದೂ ಆಕೆ ಬಯಸುತ್ತಾಳಂತೆ!