Select Your Language

Notifications

webdunia
webdunia
webdunia
webdunia

ಸೀನು ಕಡಿಮೆ ಮಾಡುತ್ತೆ ಈ ಮನೆಮದ್ದು

ಸೀನು ಕಡಿಮೆ ಮಾಡುತ್ತೆ ಈ ಮನೆಮದ್ದು
ಬೆಂಗಳೂರು , ಮಂಗಳವಾರ, 12 ಮಾರ್ಚ್ 2019 (06:56 IST)
ಬೆಂಗಳೂರು : ಕೆಲವರಿಗೆ ಪದೇ ಪದೇ ಸೀನು ಬರುತ್ತಿರುತ್ತದೆ. ಡಸ್ಟ್ ಅಲರ್ಜಿಯಿಂದ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತದೆ. ಇದರಿಂದ ಕೆಲವರಿಗೆ ಕಿರಿಕಿರಿ ಉಂಟಾಗುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.


ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಖಾಲಿಹೊಟ್ಟೆಯಲ್ಲಿ ತುಳಸಿ ಎಲೆ ತಿನ್ನಿ ಇಲ್ಲವಾದರೆ ತುಳಸಿ ಟೀ ಮಾಡಿಕೊಂಡು ಕುಡಿಯಿರಿ ಅಥವಾ ತುಳಸಿ ರಸ 20ml ನಷ್ಟು ಕುಡಿಯಿರಿ. ಹೀಗೆ ಪ್ರತಿದಿನ ಮಾಡಿದರೆ ಸೀನಿನ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ ಯಾವುದೇ ರೀತಿಯಾದ  ಅಲರ್ಜಿ ಕೂಡ ಆಗುವುದಿಲ್ಲ.


1 ಟೀ ಚಮಚ ಶುದ್ಧ ಹಸುವಿನ ತುಪ್ಪಕ್ಕೆ 1 ಚಿಟಿಕೆ ಇಂಗು ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಇಂಗು ಕರಗಿದ ಕೂಡಲೆ ಸ್ಟೌವ್ ಆಫ್ ಮಾಡಿ ತುಪ್ಪ ತಣ್ಣಗಾಗಲು ಬಿಡಿ. ನಂತರ ರಾತ್ರಿ 1-2 ಹನಿ ತುಪ್ಪವನ್ನು ನಿಮ್ಮ ಮೂಗಿನ 2 ರಂಧ್ರಕ್ಕೆ ಹಾಕಿ ಮಲಗಿ. ಹೀಗೆ ಮಾಡಿದ್ರೆ ಸೀನಿನ ಸಮಸ್ಯೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಲೈಂಗಿಕ ದಾಹ ತೀರಿಸಲು ಆಗುತ್ತಿಲ್ಲ ಏನು ಮಾಡಲಿ?