Select Your Language

Notifications

webdunia
webdunia
webdunia
webdunia

ಬೆನ್ನು ನೋವು, ಸೊಂಟ ನೋವು ಸಮಸ್ಯೆ ಗೆ ಇಲ್ಲಿದೆ ಸೂಪರ್ ಮನೆಮದ್ದು

ಬೆನ್ನು ನೋವು, ಸೊಂಟ ನೋವು ಸಮಸ್ಯೆ ಗೆ ಇಲ್ಲಿದೆ ಸೂಪರ್ ಮನೆಮದ್ದು
ಬೆಂಗಳೂರು , ಶನಿವಾರ, 9 ಮಾರ್ಚ್ 2019 (07:00 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಬೆನ್ನು ನೋವು, ಸೊಂಟ ನೋವು ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಗಳನ್ನು ಬಳಸುವ ಬದಲು ಮನೆಮದ್ದಿನಿಂದಲೂ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.


ಒಣ ಖರ್ಜೂರ , ಸಾಂಬ್ರಾಣಿ(Benzoin resin or styrax resin)ಪುಡಿ ತೆಗೆದುಕೊಳ್ಳಿ. ಖರ್ಜೂರವನ್ನು 2 ಪೀಸ್ ಮಾಡಿ ಬೀಜ ತೆಗೆದು ಅದಕ್ಕೆ ಸಾಂಬ್ರಾಣಿ ಪುಡಿಯನ್ನು ತುಂಬಿ ನಂತರ ಅದನ್ನು ದಾರದಿದ ಕಟ್ಟಬೇಕು. ಹೀಗೆ ಎಲ್ಲಾವನ್ನು ರೆಡಿಮಾಡಿಕೊಳ್ಳಿ.
ನಂತರ ಮೈದಾಹಿಟ್ಟನ್ನು ನೀರು ಹಾಕಿ ಪೇಸ್ಟ್ ಮಾಡಿಕೊಂಡು ಅದರಿಂದ ಖರ್ಜೂರವನ್ನು ಪುಲ್ ಕವರ್ ಮಾಡಬೇಕು. ನಂತರ ಅದನ್ನು ಚೆನ್ನಾಗಿ ಕೆಂಡದಲ್ಲಿ ಬೇಯಿಸಿ. ನಂತರ ಅದು ಕಪ್ಪಗಾದ ಮೇಲೆ ಅದರ ಮೇಲಿದ್ದ ಮೈದಾಹಿಟ್ಟನ್ನು ತೆಗೆಯಿರಿ. ನಂತರ ಆ ಖರ್ಜೂರವನ್ನು ರುಬ್ಬುವ ಕಲ್ಲಿನಲ್ಲಿ ಕುಟ್ಟಿಕೊಂಡಾಗ ಅದು ಪೇಸ್ಟ್ ತರಹ ಆಗುತ್ತೆ. ಅದನ್ನು ಸಣ್ಣ ಗೋಲಿ ಆಕಾರದಲ್ಲಿ ಉಂಡೆ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಇದನ್ನು ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ.


ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಊಟವಾದ ಮೇಲೆ ತೆಗೆದುಕೊಳ್ಳಬೇಕು. ಒಟ್ಟು 40 ದಿನ ಇದನ್ನು ತೆಗೆದುಕೊಳ್ಳಲೇಬೇಕು. ಹೀಗೆ ಮಾಡಿದರೆ ನಿಮ್ಮ ಬೆನ್ನು ನೋವು, ಸೊಂಟ ನೋವು ಕಡಿಮೆಯಾಗುತ್ತದೆ.      

  
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಜೀವನ ಸುಖವಾಗಿರಬೇಕಾದ್ರೆ ಹೀಗೆ ಮಾಡಿ…